ಗುರುವಾರ , ಮೇ 19, 2022
21 °C

ದೆಹಲಿಯಲ್ಲಿ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಂಗ ವಿಜಯಾ ತಂಡದವರು ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಎಂಬ ನಾಟಕ ರಚಿಸಿದ್ದು ಇದನ್ನು ನವದೆಹಲಿಯಲ್ಲಿ
ಪ್ರದರ್ಶಿಸಲಿದ್ದಾರೆ.

‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ರಾಜ್ಯದ ವೀರ ಸೇನಾನಿಗಳ ತ್ಯಾಗ, ಬಲಿದಾನವನ್ನು ಸಾರುವುದು ನಾಟಕದ ಉದ್ದೇಶ. ದೆಹಲಿಯ ಕರ್ನಾಟಕ ಸಂಘದ 75ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶಿಸಲಾಗುತ್ತಿದೆ’ ಎಂದು ರಂಗ ವಿಜಯಾ ತಂಡದ ಗೌರವ ಅಧ್ಯಕ್ಷೆ ಪಲ್ಲವಿ ಮಣಿ ತಿಳಿಸಿದ್ದಾರೆ.

‘ಡಾ.ಟಿ.ಲಕ್ಷ್ಮಿನಾರಾಯಣ ಅವರು ರಚಿಸಿರುವ ಈ ನಾಟಕವನ್ನು ಮಾಲೂರು ವಿಜಿ ನಿರ್ದೇಶಿಸಿದ್ದಾರೆ’ ಎಂದು ಪಲ್ಲವಿ ಅವರು ಹೇಳಿ
ದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.