ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪ: ದೇಹದಾರ್ಢ್ಯಪಟು ಬಂಧನ

Last Updated 4 ಮೇ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೇಹದಾರ್ಢ್ಯಪಟು ಸಿದ್ದಿಕ್‌ (34) ಎಂಬಾತನನ್ನು ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮುಂಬೈ ಮೂಲದ ಯುವತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ’. ‘ಯುವತಿ ಹಾಗೂ ಸಿದ್ದಿಕ್‌ ‘ಇನ್‌ಸ್ಟಾಗ್ರಾಂ’ ಮೂಲಕ ಪರಿಚಿತರಾಗಿದ್ದರು. ಸ್ಪರ್ಧೆಯೊಂದಕ್ಕೆ ದೇಹ ಹುರಿಗೊಳಿಸಲು ನಿರ್ಧರಿಸಿದ್ದ ಯುವತಿಯು ಆರೋಪಿಯ ಬಳಿ ತರಬೇತಿ ಪಡೆಯಲೆಂದು ನಗರಕ್ಕೆ ಬಂದಿದ್ದರು. ತರಬೇತಿ ವೇಳೆ ಇಬ್ಬರೂ ಸಲುಗೆಯಿಂದ ಇದ್ದರು. ಕ್ರಮೇಣ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು. ಯುವತಿಯನ್ನು ಮದುವೆಯಾಗಲು ಆರೋಪಿ ನಿರಾಕರಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT