ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನದಲ್ಲಿ ‘ರ‍್ಯಾಪಿಡ್ ರಸ್ತೆ’ ಸಿದ್ಧ

ಬಿಬಿಎಂಪಿಯಿಂದ ಹೊಸ ತಂತ್ರಜ್ಞಾನ ಅಳವಡಿಕೆ; ಇನ್ನು ಮುಂದೆ ವೈಟ್‌ ಟಾಪಿಂಗ್‌ ಇಲ್ಲ
Last Updated 22 ನವೆಂಬರ್ 2022, 15:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ರಸ್ತೆಗಳ ನಿರ್ಮಾಣಕ್ಕೆ ತಿಂಗಳುಗಟ್ಟಲೆ ಕಾಯಬೇಕಾದ ಅಗತ್ಯ ಇಲ್ಲ.ಕಾಂಕ್ರೀಟ್‌ ಹಾಕಿ ಅದನ್ನು ತಿಂಗಳುಗಟ್ಟಲೆ ಕ್ಯೂರ್‌ಮಾಡಬೇಕಾಗಿಯೂಇಲ್ಲ. ಮೂರು ದಿನಗಳಲ್ಲಿ ರಸ್ತೆ ಸಂಚಾರಕ್ಕೆಸಿದ್ಧವಾಗುತ್ತದೆ... ಅದಕ್ಕೆ ಇದನ್ನು ‘ರ‍್ಯಾಪಿಡ್‌ ರಸ್ತೆ’ ಎಂದು ಕರೆಯಲಾಗುತ್ತದೆ.

ಬಿಬಿಎಂಪಿಇಂತಹ ಕ್ಷಿಪ್ರಗತಿಯಲ್ಲಿ ನಿರ್ಮಾಣವಾಗುವ ‘ರ‍್ಯಾಪಿಡ್‌ ರಸ್ತೆ’ಗಳನ್ನು ವೈಟ್‌ ಟಾಪಿಂಗ್‌ ರಸ್ತೆಗೆ ಪರ್ಯಾಯವಾಗಿ ಅನುಷ್ಠಾನಕ್ಕೆ ತರಲಿದೆ. ಹಳೇ ಮದ್ರಾಸ್‌ ರಸ್ತೆಯಲ್ಲಿ ಈ ಹೊಸ ತಂತ್ರಜ್ಞಾನದ ರಸ್ತೆಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸಬಿನ್ನಿಮಂಗಲವೃತ್ತದಲ್ಲಿ 500 ಮೀಟರ್‌ ರಸ್ತೆಯನ್ನು ‘ಪ್ರೀಕಾಸ್ಟ್ಪೋಸ್ಟ್ಟೆನ್ಷನಿಂಗ್ಕಾಂಕ್ರೀಟ್ ಪೇವ್‌ಮೆಂಟ್‌’ ತಂತ್ರಜ್ಞಾನ ‘ರ‍್ಯಾಪಿಡ್‌ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಮುಖ್ಯ ಆಯುಕ್ತರುಸೇರಿದಂತೆಪ್ರಧಾನ ಎಂಜಿನಿಯರ್‌ ಈ ರಸ್ತೆಯನ್ನು ಪರಿಶೀಲಿಸಿದ್ದು, ಮುಂದೆ ನಗರದಲ್ಲಿ ಇಂತಹದ್ದೇ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.

ಮೇಲ್ಸೇತುವೆ,ಮೆಟ್ರೊಹಳಿ ನಿರ್ಮಿಸುವ ಸಂದರ್ಭದಲ್ಲಿ ಪ್ರೀಕಾಸ್ಟ್‌ ಪ್ಯಾನಲ್‌ಗಳನ್ನು ಅಳವಡಿಸಲಾಗುತ್ತದೆ.ಅದೇರೀತಿಯಲ್ಲಿ ಇದೀಗ ರಸ್ತೆಯ ಮೇಲೆ ‘ಪ್ರೀಕಾಸ್ಟ್‌ ಪೋಸ್ಟ್‌ ಟೆನ್ಷನಿಂಗ್‌ ಕಾಂಕ್ರೀಟ್‌ ಪ್ಯಾನಲ್‌’ಗಳನ್ನು ಅಳವಡಿಸಲಾಗುತ್ತದೆ. ವಾಹನಗಳು ಇದರ ಮೇಲೆ ಸಂಚರಿಸುವಾಗಅದರಭಾರ ಪೂರ್ಣ ಈ ಪ್ಯಾನಲ್‌ಗಳ ಮೇಲೆ ಬೀಳುವಂತೆ ಪೋಸ್ಟ್‌ ಟೆನ್ಷನಿಂಗ್‌ಮಾಡಲಾಗಿರುತ್ತದೆ. ಒಂದು ಪ್ಯಾನಲ್‌ನಿಂದ ಮತ್ತೊಂದು ಪ್ಯಾನಲ್‌ಗೆ ಸರಳುಗಳಸಂಪರ್ಕವಿರುತ್ತದೆ.

‘ಮನೆಯಲ್ಲಿ ನೆಲಹಾಸಿಗೆ ಟೈಲ್ಸ್‌ ಅಥವಾ ಗ್ರಾನೈಟ್‌ಹಾಕುವಂತೆಯೇಈ ಪ್ಯಾನಲ್‌ಗಳನ್ನು ರಸ್ತೆಯಲ್ಲಿ ಅಳವಡಿಸಲಾಗುತ್ತದೆ. ಪ್ಯಾನಲ್‌ಗಳ ನಡುವಿನ ಸರಳು ಅಳವಡಿಸುವುದರಿಂದ ಮತ್ತಷ್ಟುಶಕ್ತಿಯುತವಾಗುತ್ತದೆ. 5ಅಡಿಅಗಲ, 20ಅಡಿಉದ್ದದ ಪ್ಯಾನಲ್‌ ಅನ್ನು ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ. ರಸ್ತೆಯ ಅಗತ್ಯಕ್ಕೆ ತಕ್ಕಂತ ವಿನ್ಯಾಸಗೊಳಿಸದ ಪ್ಯಾನಲ್‌ಗಳನ್ನೂ ತಯಾರಿಸಬಹುದಾಗಿದೆ’ ಎಂದುಬಿಬಿಎಂಪಿಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದರು.

‘ವೈಟ್‌ಟಾಪಿಂಗ್‌ ಮಾಡುವುದರಿಂದಅದರಬಾಳಿಕೆ ಹೆಚ್ಚು. ಆದರೆ, ವೈಟ್‌ ಟಾಪಿಂಗ್‌ ಮಾಡುವ ಸಂದರ್ಭದಲ್ಲಿ ತಿಂಗಳುಗಟ್ಟಲೆ ಸಂಚಾರವನ್ನುತಡೆಹಿಡಿಯಬೇಕಾಗುತ್ತದೆ.ಇದರಿಂದಸಾಕಷ್ಟು ದಟ್ಟಣೆ ಉಂಟಾಗುತ್ತದೆ. ಇದಕ್ಕೆಲ್ಲ ಪರಿಹಾರ ‘ರ‍್ಯಾಪಿಡ್‌ ರಸ್ತೆ’. ಮೂರು ದಿನದಲ್ಲಿ ರಸ್ತೆ ಸಿದ್ಧವಾಗಲಿದ್ದು, ವೈಟ್‌ ಟಾ‍ಪಿಂಗ್‌ ರಸ್ತೆಗಿಂತ ಹೆಚ್ಚು ಬಾಳಿಕೆ ಬರಲಿದೆ’ ಎಂದರು.

ಗುಂಡಿಬೀಳಲ್ಲ,ಹಾಳಾಗಲ್ಲ...

‘ಆದಿತ್ಯಾಬಿರ್ಲಾಅಲ್ಟ್ರಾ ಟೆಕ್‌ ಸಂಸ್ಥೆ ಆರ್‌ ಆ್ಯಂಡ್‌ ಡಿ ಸಹಯೋಗದೊಂದಿಗೆಬಿಬಿಎಂಪಿಈ ‘ರ‍್ಯಾಪಿಡ್‌ ರಸ್ತೆ’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ರಸ್ತೆಯಲ್ಲಿ ಎಂದಿಗೂ ಗುಂಡಿ ಬೀಳುವುದಿಲ್ಲ. ದೀರ್ಘಾವಧಿ ಬಾಳಿಕೆ ಬರುತ್ತದೆ. ನಮ್ಮ ಮುಂದಿನನಾಲ್ಕಾರುತಲೆಮಾರು, 100–200 ವರ್ಷವಾದರೂ ರಸ್ತೆ ಏನೂ ಆಗುವುದಿಲ್ಲ’ ಎಂದುಬಿಬಿಎಂಪಿಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದರು.

‘ಅಲ್ಟ್ರಾಟೆಕ್‌ನಿಂದ ತಂತ್ರಜ್ಞಾನ ಅಳವಡಿಕೆಯಲ್ಲಿ ನೆರವು ನೀಡಲಾಗುತ್ತಿದೆ. ರಸ್ತೆ ಸಮತಟ್ಟು, ಇತರೆ ಸೌಲಭ್ಯಗಳನ್ನು ಒದಗಿಸಿ ರ್‍ಯಾಪಿಡ್‌ ರಸ್ತೆ ಆರೇಳು ದಿನದಲ್ಲಿ ನಿರ್ಮಾಣವಾಗುತ್ತದೆ. ಪ್ಯಾನಲ್‌ ಅಳವಡಿಸಿದ ಮೂರನೇದಿನಕ್ಕೇವಾಹನ ಸಂಚಾರ ಸಾಧ್ಯವಾಗುತ್ತದೆ. ಸೋಮವಾರ ಇಲ್ಲಿ ಕೆಲಸಆರಂಭಿಸಿದೆವು. ಸುಮಾರು 40 ಮೀಟರ್‌ ರಸ್ತೆ ಪೂರ್ಣಗೊಂಡಿದೆ. ಬುಧವಾರ ವಾಹನ ಸಂಚಾರ ಮಾಡಬಹುದು. ಸುಮಾರು 7 ಇಂಚು ದಪ್ಪದ ಪ್ಯಾನಲ್‌ ಇಲ್ಲಿ ಅಳವಡಿಸಲಾಗಿದೆ’ ಎಂದು ಅಲ್ಟ್ರಾಟೆಕ್‌ನ ತಾಂತ್ರಿಕ ತಜ್ಞಪಿ.ಎಂ.ಹಿರೇಮಠತಿಳಿಸಿದರು.


ವ್ಯತ್ಯಾಸ

ವೈಟ್‌ ಟಾಪಿಂಗ್‌ ರಸ್ತೆ;ರ್‍ಯಾಪಿಡ್‌ ರಸ್ತೆ

ನಿರ್ಮಾಣಅವಧಿ;ಕನಿಷ್ಠ 30 ದಿನ;3 ದಿನ

ಒಂದುಕಿ.ಮೀಗೆ₹2.4 ಕೋಟಿ;ಶೇ18ರಿಂದ 20ರಷ್ಟು ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT