ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಬಿ.ಎನ್. ರವಿಕುಮಾರ್, ‘ರಾಜ್ಯದಾದ್ಯಂತ ಚಾಲಕರು ವಾಣಿಜ್ಯ ಬಳಕೆ ವಾಹನಗಳ ಮೂಲಕ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ಅನಧಿಕೃತ ಬೈಕ್ ಟ್ಯಾಕ್ಸಿ ಮತ್ತು ಪೋರ್ಟರ್ ಸಂಸ್ಥೆಗಳಿಂದ ಆಟೊ ಮತ್ತು ಗೂಡ್ಸ್ ವಾಹನಗಳ ಮಾಲೀಕರಿಗೆ ನಷ್ಟವಾಗುತ್ತಿದೆ. ಅನಧಿಕೃತವಾಗಿ ಬೈಕ್ ಟ್ಯಾಕ್ಸಿ (ವೈಟ್ ಬೋರ್ಡ್) ಮೂಲಕ ಪ್ರತಿದಿನ 80 ಸಾವಿರ ಬುಕ್ಕಿಂಗ್ ಸೇವೆ ನೀಡುತ್ತಿವೆ’ ಎಂದು ದೂರಿದರು.