ಬೆಂಗಳೂರು: ನಟೇಶ ನೃತ್ಯಾಲಯ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಸಾನುಭವ’ ಕಾರ್ಯಕ್ರಮದಲ್ಲಿ ವಿವಿಧ ಭಾರತೀಯ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡವು.

ಶ್ರೀಹರಿ ಮತ್ತು ತಂಡದಿಂದ ಕಥಕ್, ನಯನಾ ಶ್ರೀನಿವಾಸನ್ ಅವರಿಂದ ಭರತನಾಟ್ಯ, ದೇವೇಶ್ ನಾಯರ್ ಅವರಿಂದ ಕೂಚಿಪುಡಿ ಮತ್ತು ಐಶ್ವರ್ಯ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನಗೊಂಡವು.

‘ಪ್ರದರ್ಶನ ಕಲೆಗಳಲ್ಲಿ ಉದ್ಯೋಗಾವಕಾಶಗಳು’ ಎಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಪ್ರಿಯಾಶ್ರೀ ರಾವ್, ಪ್ರದರ್ಶನ ಕಲೆ ಕ್ಷೇತ್ರದಲ್ಲಿ ವೃತ್ತಿ ನಿರ್ಮಾಣದ ಸಾಧ್ಯತೆಗಳು, ಸವಾಲುಗಳು ಮತ್ತು ಭವಿಷ್ಯದ ದಿಕ್ಕುಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪಿ.ಪ್ರವೀಣ್ ಕುಮಾರ್ ಅವರ ಭರತನಾಟ್ಯ, ನೀನಾ ಪ್ರಸಾದ್ ಅವರ ಮೋಹಿನಿಯಾಟಂ ಮತ್ತು ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್ ತಂಡದಿಂದ ಪ್ರದರ್ಶಿಸಲ್ಪಟ್ಟ ‘ಗೋವರ್ಧನ ಲೀಲೆ’ ನೃತ್ಯರೂಪಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ‘ಗೋವರ್ಧನ ಲೀಲೆ’ ಪ್ರದರ್ಶನವು ತನ್ನ ವೈಭವ, ನಿರೂಪಣೆ ಮತ್ತು ಭಾವಗಾಢತೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಭಾಜನವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.