ಸಂಘರ್ಷ ನಿಭಾಯಿಸುವವನೇ ನಿಜ ಪತ್ರಕರ್ತ

7
ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾ ದಿನಾಚರಣೆ

ಸಂಘರ್ಷ ನಿಭಾಯಿಸುವವನೇ ನಿಜ ಪತ್ರಕರ್ತ

Published:
Updated:

ಬೆಂಗಳೂರು: ‘ಸಂಘರ್ಷವನ್ನು ಸರಿಯಾಗಿ ನಿರ್ವಹಿಸುವವನೇ ನಿಜವಾದ ಪತ್ರಕರ್ತ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. 

ನಗರದ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಸಂಕಟ, ಸಾಧ್ಯತೆ, ಮತ್ತು ಸವಾಲುಗಳು ಕುರಿತು ಅವರು ಮಾತನಾಡಿದರು.

‘ಪತ್ರಕರ್ತರು ಹಲವು ಕಾರಣಗಳಿಂದ ಮಾನಸಿಕ ಒತ್ತಡ ಹಾಗೂ ಸಂಘರ್ಷಕ್ಕೆ ಒಳಗಾಗುತ್ತಿದ್ದಾರೆ. ವಾಸ್ತವವನ್ನು ಇದ್ದ ಹಾಗೆ ಹೇಳಿಕೊಳ್ಳುವ ಸ್ವಾತಂತ್ರ್ಯ ಪತ್ರಕರ್ತರಿಗೆ ಇಲ್ಲ. ಆಂತರಿಕ ಮತ್ತು ಬಾಹ್ಯ ಒತ್ತಡದಲ್ಲಿ ಮಾಧ್ಯಮಗಳು ಕೆಲಸ ನಿರ್ವಹಿಸುತ್ತಿವೆ. ಬೆಳಕಿದ್ದರೂ ಕತ್ತಲನ್ನು ಅನುಭವಿಸುವ ಸ್ಥಿತಿಯನ್ನು ದೇಶ ತಲುಪಿದೆ’ ಎಂದರು.

ಪತ್ರಿಕಾ ಪಾತಿವ್ರತ್ಯ ಮುಖ್ಯ: ‘ಪತ್ರಿಕಾ ಸ್ವಾತಂತ್ರ್ಯದ ಪಾತಿವ್ರತ್ಯಕ್ಕೆ ಭಂಗ ತರುವ ಅನೇಕ ಸಂದರ್ಭಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಇದು ಸ್ವತಃ ಪತ್ರಕರ್ತರ ಪಾತಿವ್ರತ್ಯ ಭಂಗಕ್ಕೆ ಅವಕಾಶ ನೀಡಿದಂತೆ. ಜಾತಿ ಧರ್ಮ ಮತ್ತು ಪಕ್ಷ ರಾಜಕಾರಣಗಳು ಗಾಂಧರ್ವ ವಿವಾಹವಾಗಿರುವ ಈ ಸಂದರ್ಭಗಳು ಪತ್ರಿಕೋದ್ಯಮಕ್ಕೆ ಹೆಚ್ಚು ಜವಾಬ್ದಾರಿ ನೀಡಿವೆ. ಮಾಲೀಕತ್ವದ ಫಲ್ಲಟಗಳು ಮುದ್ರಣ ಮಾಧ್ಯಮವನ್ನು ಹಾಳು ಮಾಡುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ರಸಪ್ರಶ್ನೆ ಸ್ಪರ್ಧೆ ವಿಜೇತರಾದ ನಾಲ್ವರು ಪತ್ರಕರ್ತರಿಗೆ ಬಹುಮಾನ ವಿತರಿಸಲಾಯಿತು.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ , ಪತ್ರಕರ್ತ ರವಿ ಹೆಗಡೆ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !