ಗುರುವಾರ , ಏಪ್ರಿಲ್ 15, 2021
19 °C

ಇಂದು ಬೊಂಬೆಗಳ ಅಂಚೆ ಲಕೋಟೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಪೋಸ್ಟ್‌ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾವು ರಾಜ್ಯದ ಚನ್ನಪಟ್ಟಣದ ಬೊಂಬೆ ಸೇರಿದಂತೆ 11 ರಾಜ್ಯಗಳ ಬೊಂಬೆಗಳ ವಿಶೇಷ ಅಂಚೆ ಲಕೋಟೆಯನ್ನು ಗುರುವಾರ ಅನಾವರಣ ಮಾಡಲಿದೆ. 

ವಿಶ್ವ ಅಂಚೆ ಲಕೋಟೆ ದಿನ ಹಾಗೂ ಅಂಚೆ ಲಕೋಟೆಯ 151ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಅಂಚೆ ಲಕೋಟೆಗಳನ್ನು ಸಿದ್ಧಪಡಿಸಲಾಗಿದ್ದು, ಏಕಕಾಲದಲ್ಲಿ ವಿವಿಧೆಡೆ ಬಿಡುಗಡೆ ಮಾಡಲಾಗುತ್ತದೆ. ನಗರದ ಜನರಲ್ ಪೋಸ್ಟ್‌ ಆಫೀಸ್‌ನ ಮೇಘದೂತ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಅವರು ಅಂಚೆ ಲಕೋಟೆಗಳನ್ನು ಅನಾವರಣ ಮಾಡಲಿದ್ದಾರೆ.

‘ಭಾರತೀಯ ಬೊಂಬೆಗಳು’ ಪರಿಕಲ್ಪನೆಯಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಓಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ಬೊಂಬೆಗಳ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು