ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ವ್ಯವಸ್ಥೆ ಹದಗೆಡಿಸಿದ ಮೋದಿ

ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಖರ್ಗೆ ಆರೋಪ
Last Updated 20 ಏಪ್ರಿಲ್ 2018, 8:13 IST
ಅಕ್ಷರ ಗಾತ್ರ

ಸೇಡಂ: ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ವ್ಯವಸ್ಥೆ ಬಲಪಡಿಸುವುದಕ್ಕಿಂತ ಹದ ಗೆಡಿಸಿದ್ದಾರೆ. ಗರಿಷ್ಠ ಮುಖ ಬೆಲೆಯ ನೋಟು ನಿಷೇಧದಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಬಿದ್ದಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ತಾಲ್ಲೂಕಿನಲ್ಲಿ 143 ಗ್ರಾಮ 53 ತಾಂಡಾಗಳಿಗೆ ಕುಡಿವ ನೀರು, ಸಿಸಿ ರಸ್ತೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ 5 ವರ್ಷದ ಅವಧಿಯಲ್ಲಿ ಸಚಿವನಾಗಿ ರಾಜ್ಯದ ಜನತೆಗೆ ಸೇವೆ ಸಲ್ಲಿಸಿದ್ದೇನೆ. ರಾಜಕೀಯ ಜೀವನದಲ್ಲಿ ನನ್ನ ನೆರಳಿಗಂಜಿ ಕೆಲಸ ಮಾಡಿದ್ದೇನೆ. ಇದು ಮತದಾರ ದೇವರು ನೀಡಿದ ಮತಗಳಿಂದ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನನಗೆ ಮತ್ತೆ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಮತಯಾಚಿಸಿದರು.

ಶಾಸಕ ಉಮೇಶ ಜಾಧವ, ಇಕ್ಬಾಲ್ ಅಹ್ಮದ ಸರಡಗಿ ಮಾತನಾಡಿದರು. ಮಾಜಿ ಶಾಸಕ ನಾಗರೆಡ್ಡಿ ಪಾಟೀಲ, ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಬಾಬಾ ಖಾನ್, ಸೈಯದ್ ಖಮರೋದ್ದಿನ್, ಸಿದ್ದು ಬಾನಾರ್, ಸುದರ್ಶನರೆಡ್ಡಿ ಪಾಟೀಲ, ವೆಂಕಟರಾಮರೆಡ್ಡಿ ಕಡತಾಲ, ಧೂಳಪ್ಪ ದೊಡ್ಡಮನಿ, ಕರೆಪ್ಪ ಪಿಲ್ಲಿ, ಶ್ರೀನಿವಾಸರಾವ ದೇಶಪಾಂಡೆ, ಅಬ್ದುಲ್ ಗಫೂರ್, ಗಣಪತರಾವ ಚಿಮ್ಮಚೋಡ್ಕರ್, ಸಿದ್ದನಗೌಡಪಾಟೀಲ ಕೋಲ್ಕುಂದಾ, ರಾಜಶೇಖರ ಪುರಾಣಿಕ, ಸತೀಶರೆಡ್ಡಿ, ಶಿವಕುಮಾರ ತೊಟ್ನಳ್ಳಿ, ಜಿಂಜಾನಿ ಜಾಗಿರದಾರ, ಜಗನ್ನಾಥ ಮೋದಿ, ಆಲಂಖಾನ್, ವೆಂಕಟರಾಮ ರೆಡ್ಡಿ ಹೈಯ್ಯಾಳ ಇದ್ದರು.

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಸ್ವಾಗತಿಸಿದರು. ನಾಗೇಶ್ವರರಾವ ಮಾಲಿಪಾಟಿಲ ನಿರೂಪಿಸಿದರು.

ಮುಕ್ರಂಖಾನ್ ಕಾಂಗ್ರೆಸ್ ಸೇರ್ಪಡೆ

ಸೇಡಂ: ಜೆಡಿಎಸ್ ಮುಖಂಡ ಮುಕ್ರಂಖಾನ್ ಅವರು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಇವರ ಜೊತೆ ಅನೇಕ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಿದರು. ಬಹುದೊಡ್ಡ ಬೆಂಬಲಿಗರ ಜೊತೆಗೆ ಪಟಾಕಿ ಸದ್ದಿನೊಂದಿಗೆ ಆಗಮಿಸಿದ ಅವರು, ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡು ಸೇರ್ಪಡೆಯಾದರು.

‘ಒಂದುವರೆ ದೇಶಕದವರೆಗೆ ತಾಲ್ಲೂಕಿನಲ್ಲಿ ರಾಜಕೀಯ ಲೀಡರ್ ನಾನಾಗಿದ್ದರೂ ಸಹ ಡಾ.ಶರಣಪ್ರಕಾಶ ಅವರೇ ಎಂಎಲ್‌ಎ ಆಗಿದ್ದಾರೆ. ಡಾ.ಶರಣಪ್ರಕಾಶ ಅವರು ಜನನಾಯಕರಾಗಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಮತ ನೀಡುವುದರ ಮೂಲಕ ಬೆಂಬಲಿಸಬೇಕು’ ಎಂದು ಮುಕ್ರಂಖಾನ್ ಮನವಿ ಮಾಡಿದರು.

ಡಾ.ಶರಪ್ರಕಾಶ ನಾಮಪತ್ರ ಸಲ್ಲಿಕೆ ಇಂದು

‘ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಏಪ್ರಿಲ್ 20 ರಂದು ತಮ್ಮ 51ನೇ ಜನ್ಮದಿನದಂದೇ ನಾಮಪತ್ರ ಸಲ್ಲಿಸಲಿದ್ದಾರೆ. ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ತಹಶೀಲ್ದಾರ್ ಕಚೇರಿಯವರೆಗೆ ಕಾರ್ಯಕರ್ತರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುವರು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ತಿಳಿಸಿದ್ದಾರೆ.

**

ಬಿಜೆಪಿಯವರಿಗೆ ಬರಿ ಸುಳ್ಳು ಹೇಳಿ ಪ್ರಚಾರಗಿಟ್ಟಿಸಿಕೊಳ್ಳುವುದೇ ಕೆಲಸವಾಗಿದೆ. ದೇಶದ ಏಳಿಗೆಯಲ್ಲಿ ಅವರ ಕೊಡುಗೆ ಶೂನ್ಯ – ಮಲ್ಲಿಕಾರ್ಜು ಖರ್ಗೆ,ಸಂಸದ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT