ಶುಕ್ರವಾರ, ಫೆಬ್ರವರಿ 21, 2020
30 °C

ರಂಗೋಲಿಯಲ್ಲಿ ಅರಳಿದ 2ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಆಟದ ಮೈದಾನದಲ್ಲಿ ರಂಗೋಲಿಯಲ್ಲಿ ಬಿಡಿಸಿದ ಎರಡು ಸಾವಿರ ಅಡಿ ವಿಸ್ತಾರದ ಬೃಹತ್ ತ್ರಿವರ್ಣ ಧ್ವಜ ಭಾನುವಾರ ನಡೆದ ಗಣರಾಜ್ಯೋತ್ಸವಕ್ಕೆ ಮೆರುಗು ತಂದಿತು. 

ಇಡೀ ಆಟದ ಮೈದಾನವನ್ನು ಆವರಿಸಿಕೊಂಡಿದ್ದ ತ್ರಿವರ್ಣ ಧ್ವಜ,  ಬಾಂಧವ ಸಂಸ್ಥೆಯ 40ಕ್ಕೂ ಹೆಚ್ಚು ಮಹಿಳೆಯರು ಮತ್ತು ಶಾಲಾ ಮಕ್ಕಳ ಶ್ರಮದಿಂದ ಅರಳಿದೆ. ಸುಮಾರು 300 ಕೆ.ಜಿ. ರಂಗೋಲಿ ಪುಡಿಯನ್ನು ಇದಕ್ಕೆ ಬಳಸಲಾಗಿದೆ. 

ಬಿಬಿಎಂಪಿ ಸದಸ್ಯ ಮತ್ತು ಬಾಂಧವ ಸಂಸ್ಥೆಯ ಮುಖ್ಯಸ್ಥ ಎನ್ ನಾಗರಾಜ್ ನೇತೃತ್ವದಲ್ಲಿ ಸತತ ಐದನೇ ವರ್ಷ ಬೃಹತ್‌ ತ್ರಿವರ್ಣ ಧ್ವಜದ ರಂಗೋಲಿ ಬಿಡಿಸಲಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು