ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ₹ 25 ಕೋಟಿ ಅನುದಾನಕ್ಕೆ ಮನವಿ

Last Updated 2 ಫೆಬ್ರುವರಿ 2023, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ಘೋಷಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನವಿ ಸಲ್ಲಿಸಿದ್ದಾರೆ.

‘ಪ್ರತಿವರ್ಷ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಸರ್ಕಾರ ₹ 10 ಕೋಟಿ ಅನುದಾನ ನೀಡುತ್ತಿದೆ. ಈಗ ವಿಶೇಷ ಅನುದಾನ ಅಗತ್ಯವಿದೆ. ಸಿ.ಎಂ ಜೊತೆ ಚರ್ಚಿಸಿದ್ದು, ಒದಗಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

‘ಪರಿಷತ್ತಿನ ವಜ್ರಮಹೋತ್ಸವ ಕಟ್ಟಡ ಮತ್ತು ಆಡಳಿತ ಕಟ್ಟಡಕ್ಕೆ ಬಣ್ಣ ಹಚ್ಚುವಿಕೆ, ಪಂಪ ಸಭಾಂಗಣ ನವೀಕರಣ, ಅಕ್ಕಮಹಾದೇವಿ ಸಭಾಂಗಣದ ಧ್ವನಿ ತಂತ್ರಜ್ಞಾನ ವ್ಯವಸ್ಥೆ ಸರಿಪಡಿಸುವುದು, ಶತಮಾನೋತ್ಸವ ಭವನದಲ್ಲಿ ಸಾಹಿತಿ ಹಾಗೂ ಕಲಾವಿದರಿಗೆ ಅತಿಥಿಗೃಹ ವ್ಯವಸ್ಥೆ ಕಲ್ಪಿಸುವುದು, ಬಿ.ಎಂ.ಶ್ರೀ. ಅಚ್ಚುಕೂಟ, ಸರಸ್ವತಿ ಗ್ರಂಥ ಭಂಡಾರ, ಪುಸ್ತಕ ಮಾರಾಟ ಕೇಂದ್ರ ಇವುಗಳ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿ, ಗ್ರಂಥಗಳ ಡಿಜಿಟಲೀಕರಣ, ತಂತ್ರಾಂಶ ಅಳವಡಿಕೆ ಮತ್ತು ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯ’ ಎಂದು ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT