ಮನೆ ಕುಸಿಯುವ ಭೀತಿಯಲ್ಲಿ ನಿವಾಸಿಗಳು

7

ಮನೆ ಕುಸಿಯುವ ಭೀತಿಯಲ್ಲಿ ನಿವಾಸಿಗಳು

Published:
Updated:
Deccan Herald

ಬೆಂಗಳೂರು: ಬೇಗೂರು ವಾರ್ಡಿನ ಯಲೇನಹಳ್ಳಿಯ ನೊಬೆಲ್ ರೆಸಿಡೆನ್ಸಿ ನಿವಾಸಿಗಳು ತಮ್ಮ ಮನೆಗಳು ಕುಸಿಯುವ ಭೀತಿಯಲ್ಲಿದ್ದಾರೆ. ನಿರ್ಮಾಣ ಕಂಪನಿಯೊಂದು ಲೇಔಟ್‌ಗೆ ಹೊಂದಿಕೊಂಡಿರುವ ಜಾಗದಲ್ಲಿ ವಸತಿ ಸಂಕೀರ್ಣ ನಿರ್ಮಾಣಕ್ಕಾಗಿ ಯಾವುದೇ ಸೆಟ್‌ಬ್ಯಾಕ್‌ ಪ್ರದೇಶವನ್ನು ಬಿಡದೇ ನೆಲ ಅಗೆಯುತ್ತಿರುವುದರಿಂದ ಮನೆಗಳು ಕುಸಿಯುತ್ತಿವೆ ಎಂದು ನಿವಾಸಿಗಳು ದೂರಿದ್ದಾರೆ.

ಸರ್ವೆ ನಂ. 22, 23, 24ರ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಿಸುತ್ತಿದ್ದು, ನಿಯಮಾವಳಿಯಂತೆ ಸುತ್ತಲೂ ಸೆಟ್ ಬ್ಯಾಕ್ ಪ್ರದೇಶವನ್ನು ಬಿಟ್ಟಿಲ್ಲ. ಈಚೆಗೆ ಸುರಿದ ಮಳೆಯಿಂದಾಗಿ ಕೆಲವು ಮನೆಗಳು ಕುಸಿದಿವೆ. ಕಂಪನಿ ಕೆಲವು ಮನೆಗಳಿಗೆ ಪಿಲ್ಲರ್ ನಿರ್ಮಿಸಿಕೊಟ್ಟಿದೆ. ಆದರೂ ನಿವಾಸಿಗಳು ಮನೆ ಕುಸಿಯುವ ಭೀತಿಯಿಂದ ಹೊರ ಬಂದಿಲ್ಲ.

‘ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಸ್ಥಳಕ್ಕೆ ಆಗಮಿಸಿ ಅಹವಾಲು ಕೇಳಿ ಹೋಗಿದ್ದರು. ನಂತರ ಈ ಕಡೆ ಯಾವ ಅಧಿಕಾರಿಯೂ ತಲೆ ಹಾಕಿಲ್ಲ’ ಎಂದು ದೂರುತ್ತಾರೆ ನಿವಾಸಿಗಳ ಸಂಘದ ಅಧ್ಯಕ್ಷ ಪ್ರಕಾಶ್.

‘ಇಲ್ಲಿರುವ ಬಂಡೆಯೊಂದನ್ನು ಒಡೆಯಲು ಡೈನಮೈಟ್ ಬಳಸುತ್ತಿರುವುದರಿಂದ ಅಕ್ಕಪಕ್ಕದ ಮನೆಗಳು ಬಿರು ಕು ಬಿಟ್ಟಿವೆ’ ಎಂದು ಅರುಣ ಎಂಬ ಮಹಿಳೆ ತಮ್ಮ ಮನೆಯ ಬಿರುಕುಗಳನ್ನು ತೋರಿಸಿ ದರು. ಜೆಸಿಬಿಗಳಿಂದ ನೆಲ ಅಗೆಯುತ್ತಿರುವುದರಿಂದ 24 ಗಂಟೆಯೂ ದೂಳಿ ನಲ್ಲೇ ಇರಬೇಕು ಎನ್ನುತ್ತಾರೆ ಅವರು.

ಪ್ರತಿಕ್ರಿಯೆಗಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಕಿರಿಯ ಎಂಜಿನಿಯರ್ ವನರಾಜು ‘ತಾನು ಇಲ್ಲಿಗೆ ಬಂದು ಏಳು ತಿಂಗಳಷ್ಟೇ ಆಗಿದೆ. ಸ್ಥಳ ವೀಕ್ಷಣೆ ಮಾಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !