ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಕಚೇರಿ: ಸಾರ್ವಜನಿಕ ಪ್ರವೇಶದ ನಿರ್ಬಂಧ ಸಡಿಲ

ಒಮ್ಮೆಗೆ ಗರಿಷ್ಠ 15 ಮಂದಿಗೆ ಪ್ರವೇಶಾವಕಾಶ
Last Updated 27 ಆಗಸ್ಟ್ 2020, 3:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಗೆ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಒಂದು ಬಾರಿಗೆ ಗರಿಷ್ಠ 15 ಜನರಿಗೆ ಮಾತ್ರ ಕಚೇರಿಯೊಳಗೆ ಪ್ರವೇಶಾವಕಾಶ ನೀಡಲಾಗುತ್ತಿದೆ.

‘ಕಚೇರಿಗೆ ಭೇಟಿ ನೀಡುವ ಸಲುವಾಗಿ ಬರುವ ಸಾರ್ವಜನಿಕರ ದೇಹದ ಉಷ್ಣಾಂಶ ಪರೀಕ್ಷೆ ನಡೆಸಲಾಗುತ್ತದೆ. ಅವರಿಗೆ ಜ್ವರದ ಲಕ್ಷಣಗಳು ಇಲ್ಲದಿದ್ದರೆ ಮಾತ್ರ ಕಚೇರಿಯೊಳಗೆ ಬಿಡುತ್ತೇವೆ. ಒಮ್ಮೆಗೆ 15 ಮಂದಿಯನ್ನು ಕಚೇರಿ ಆವರಣದ ಒಳಗೆ ಬಿಡುತ್ತೇವೆ. ಅವರು ತಮ್ಮ ಕೆಲಸ–ಕಾರ್ಯಗಳನ್ನು ಮುಗಿಸಿ ಹೊರಗೆ ಬಂದ ಬಳಿಕ ಮತ್ತೆ 15 ಮಂದಿಯನ್ನು ಒಳಗೆ ಬಿಡುತ್ತೇವೆ’ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್‌ ತಿಳಿಸಿದ್ದಾರೆ.

ಬುಧವಾರ ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಚೇರಿಗೆ ಬಂದಿದ್ದರು. ಅವರನ್ನು ಭದ್ರತಾ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ.

‘ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಒಮ್ಮೆಲೆ ಹೆಚ್ಚಿನ ಸಾರ್ವಜನಿಕರು ಬಂದಿದ್ದರಿಂದ ಬುಧವಾರ ಸ್ವಲ್ಪ ಸಮಯ ಗೊಂದಲ ಉಂಟಾಗಿತ್ತು. ಬಂದಿದ್ದ ಎಲ್ಲರಿಗೂ ಹಂತ ಹಂತವಾಗಿ ಕಚೇರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಅವರು ತಿಳಿಸಿದರು.

‘ನಗರದಲ್ಲಿ ಕೋವಿಡ್‌ ವ್ಯಾಪಕವಾಗಿರುವುದರಿಂದ ಸಾರ್ವಜನಿಕರು ಮುಂಚಿತವಾಗಿ ತಿಳಿಸಿ, ಅನುಮತಿ ಪಡೆದು ಕಚೇರಿಗೆ ಬಂದರೆ ಒಳ್ಳೆಯದು. ಇ–ಮೇಲ್‌ (bda.appointment123@gmail.com) ಮೂಲಕ ಅಥವಾ ಕರೆ ಮಾಡಿ (080–23368435/23368036) ಕಚೇರಿ ಭೇಟಿ ಬಗ್ಗೆ ಮಾಹಿತಿ ನೀಡಿ ಅನುಮತಿ ಪಡೆಯಬಹುದು’ ಎಂದು ಅವರು ತಿಳಿಸಿದರು.

ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ:

ಪ್ರಾಧಿಕಾರದ ಸಿಬ್ಬಂದಿಯನ್ನು ಬುಧವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರ ಫಲಿತಾಂಶವು ಇನ್ನಷ್ಟೇ ಬರಬೇಕಿದೆ. ಎಂಜಿನಿಯರಿಂಗ್‌ ವಿಭಾಗದ ಒಬ್ಬ ಅಧಿಕಾರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಪ್ರಾಧಿಕಾರದ ಕೆಲವು ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಕಳೆದ ವಾರ ನಾಲ್ಕು ದಿನ ಬಿಡಿಎ ಕೇಂದ್ರ ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT