ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಾ ವಿ.ವಿಯ 2,800 ವಿದ್ಯಾರ್ಥಿಗಳಿಗೆ ಉದ್ಯೋಗ

Last Updated 11 ಏಪ್ರಿಲ್ 2022, 4:24 IST
ಅಕ್ಷರ ಗಾತ್ರ

ಬೆಂಗಳೂರು: ರೇವಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ 2,800 ವಿದ್ಯಾರ್ಥಿಗಳು ಈ ಸಾಲಿನಲ್ಲಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ. ವಿಶ್ವವಿದ್ಯಾಲಯದ ವೃತ್ತಿ ಮಾರ್ಗದರ್ಶನ ಕೇಂದ್ರದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ರೇವಾ ಅಭಿನಂದನ’ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕುಲಾಧಿಪತಿ ಪ್ರೊ.ಪಿ.ಶ್ಯಾಮರಾವ್‌ ಅವರು ಮಾತನಾಡಿ, ‘ವಿದ್ಯಾರ್ಥಿಗಳ ಗಮನಾರ್ಹ ಸಾಧನೆಯು ನಮಗೆ ಹೆಮ್ಮೆ ಮೂಡಿಸಿದೆ. ಸಂಸ್ಥೆಯ ವಿದ್ಯಾರ್ಥಿಗಳು ಉದ್ಯೋಗದಾತರಾಗಬೇಕು ಎಂಬುದು ನಮ್ಮ ಕನಸು. ಇದು 2025ರ ಒಳಗೆ ಕೈಗೂಡಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಧನಂಜಯ ಅವರು ಮಾತನಾಡಿ, ‘ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿಪಡಿಸಿಕೊಂಡು ವೃತ್ತಿ ಜೀವನದಲ್ಲಿ ಉತ್ತುಂಗಕ್ಕೇರಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯು ಅಗತ್ಯ ಸಹಾಯ ಮಾಡಲಿದೆ’ ಎಂದು ಹೇಳಿದರು.

ಮೈಂಡ್‌ಟ್ರೀ ಸಂಸ್ಥೆಯ ಪ್ರತಿಭಾರ್ಜನೆ ವಿಭಾಗದ ಜಾಗತಿಕ ಮುಖ್ಯಸ್ಥ ವೆಂಕಟರಾಮಶೇಷನ್‌, ಎನ್‌ಟಿಟಿ ಲಿಮಿಟೆಡ್‌ ಸಂಸ್ಥೆಯ ಕಾರ್ಯಾಚರಣೆ ವಿಭಾಗದ ನಿರ್ದೇಶಕ ರಾಜೀವ್‌ ವಾಜೀರ್‌, ಬೆಟ್ಸೋಲ್‌ ಸಂಸ್ಥೆಯ ಪ್ರತಿಭಾರ್ಜನೆ ವಿಭಾಗದ ಜಾಗತಿಕ ಮುಖ್ಯಸ್ಥೆ ಗುರುಪ್ರೀತ್‌ ಜಗ್ಗಿ, ಕಾಗ್ನಿಜೆಂಟ್‌ ಸಂಸ್ಥೆಯ ನೇಮಕಾತಿ ವಿಭಾಗದ ವ್ಯವಸ್ಥಾಪಕ ಅಂಕುರ್‌ ಬ್ಯಾನರ್ಜಿ ಅವರು ಅತಿಥಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT