ಯಲಹಂಕ: ಭವಿಷ್ಯದ ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ಕೌಶಲಯುತ ಹಾಗೂ ಬಹುಶಿಸ್ತೀಯ ವೃತ್ತಿಪರರನ್ನು ರೂಪಿಸಲು ರೇವಾ ವಿಶ್ವವಿದ್ಯಾಲಯ ಹಲವು ನೂತನ ಶೈಕ್ಷಣಿಕ ಉಪಕ್ರಮಗಳನ್ನು ಘೋಷಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಾಧಿಪತಿ ಪಿ.ಶ್ಯಾಮರಾಜು, ‘ಭಾರತ, ತಾಂತ್ರಿಕ ಹಾಗೂ ಕೈಗಾರಿಕಾ ಪರಿವರ್ತನೆಯ ಮಹತ್ವದ ಹಾದಿಯಲ್ಲಿದೆ. ವಿವಿಧ ಕ್ಷೇತ್ರಗಳಲ್ಲಿ ಪರಿಣತ ಪ್ರತಿಭೆಗಳ ಕೊರತೆ ಮುಂದುವರಿದಿದ್ದು, ಅದನ್ನು ನಾವು ಸವಾಲಾಗಿ ನೋಡದೆ ಅವಕಾಶವಾಗಿ ಪರಿಗಣಿಸಿದ್ದೇವೆ. ಬಹುಶಿಸ್ತೀಯ ಕಲಿಕೆ, ಎ.ಐ ಸಂಯೋಜಿತ ಪಠ್ಯಕ್ರಮ, ಸೆಂಟರ್ಸ್ ಆಫ್ ಎಕ್ಸ್ಲೆನ್ಸ್, ಉದ್ಯಮ ಸಹಯೋಗ ಹಾಗೂ ವಿದ್ಯಾರ್ಥಿ ವೇತನಗಳ ಮೂಲಕ ವಿದ್ಯಾರ್ಥಿಗಳಿಗೆ ನೈಜ ಜಗತ್ತಿನ ಕೌಶಲ ಮತ್ತು ಜಾಗತಿಕ ದೃಷ್ಟಿಕೋನ ನೀಡುವ ವಾತಾವರಣ ನಿರ್ಮಿಸುತ್ತಿದ್ದೇವೆ’ ಎಂದು ಹೇಳಿದರು.

ಸೆಮಿಕಂಡಕ್ಟರ್, ಏರೋಸ್ಪೇಸ್, ಎಲೆಕ್ಟ್ರಿಕ್ ಮೊಬಿಲಿಟಿ, ಸ್ವಚ್ಛ ಇಂಧನ, ಆಟೋಮೆಷನ್, ಡಿಜಿಟಲ್ ಮೂಲಸೌಕರ್ಯ ಹಾಗೂ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯಮಗಳಿಗೆ ಸಿದ್ಧಗೊಳಿಸುವತ್ತ ಒತ್ತು ನೀಡುತ್ತಿದೆ ಎಂದರು.

ಕುಲಸಚಿವ ಎಂ.ಧನಂಜಯ ಮಾತನಾಡಿ, ವಿಶ್ವವಿದ್ಯಾಲಯದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿ ‘ದಿವ್ಯಶ್ರೀ ಸಹಯೋಗದಲ್ಲಿ ಪ್ರತಿಷ್ಠಿತ ಪರಿಣತಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಡಿ ಸಿವಿಲ್, ಮೆಕ್ಯಾನಿಕಲ್ ಮತ್ತು ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುಸ್ಥಿರ ಮೂಲಸೌಕರ್ಯ, ಸ್ಮಾರ್ಟ್ ತಂತ್ರಜ್ಞಾನ, ಅರ್ಬನ್ ಇನೋವೇಷನ್ ಹಾಗೂ 3ಡಿ ಪ್ರಿಂಟಿಂಗ್ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ರೇವಾ ಬಿಸಿನೆಸ್ ಸ್ಕೂಲ್ ಮತ್ತು ಕಾಮರ್ಸ್ ಮ್ಯಾನೇಜ್ಮೆಂಟ್ ವಿಭಾಗದ ಡೀನ್ ಶುಭಾ.ಎ, ದಾಖಲಾತಿ ವಿಭಾಗದ ನಿರ್ದೇಶಕ ಗೌರವ್ ಯಾದವ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-4-1753534805

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.