ಹೈದರಾಬಾದ್: ಹೈದರಾಬಾದ್ ನಗರವನ್ನು ಕೊಂಡಾಡುವ ಸಲುವಾಗಿ ಐಟಿ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮುಂಬೈ, ಚೆನ್ನೈ, ಕೋಲ್ಕತ್ತ ನಗರಗಳನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೀಯಾಳಿಸಿದ್ದಾರೆ.

ಮಹಿಳಾ ದಿನಾಚರಣೆ ಪ್ರಯುಕ್ತ ಪತ್ರಕರ್ತೆಯರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಖಂಡ ಆಂಧ್ರಪ್ರದೇಶವಿದ್ದಾಗ ವೈ.ಎಸ್. ರಾಜಶೇಖರ್ ರೆಡ್ಡಿ ಹಾಗೂ ಚಂದ್ರಬಾಬು ನಾಯ್ಡು ಅವರ ಸಮಯದಲ್ಲಿ ಹೈದರಾಬಾದ್ ನಗರ ಭಾರತದ ಅದ್ಭುತ ನಗರವಾಗಿ ಬೆಳೆದಿದೆ. ಅದರ ಕೀರ್ತಿಯನ್ನು ನಾವು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ. ನೀವೆ ನೋಡಿ, (ಸಭಿಕರನ್ನುದ್ದೇಶಿಸಿ) ವಿಪರೀತ ಟ್ರಾಫಿಕ್ ಸಮಸ್ಯೆ ಹಾಗೂ ಮಾಲಿನ್ಯದಿಂದಾಗಿ ಐಟಿ ಸಿಟಿ ಖ್ಯಾತಿಯ ಬೆಂಗಳೂರು ಪರಿಸ್ಥಿತಿ ಹೇಗಾಗಿದೆ..? ಹೈದರಾಬಾದ್ನಲ್ಲಿ ಮಾಲಿನ್ಯ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದೇವೆ. ಅವು ಫಲ ನೀಡುತ್ತಿವೆ. ಬೆಂಗಳೂರು ರೀತಿ ನಮ್ಮಲ್ಲಿ ಟ್ರಾಫಿಕ್ ಇರುವುದಿಲ್ಲ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

ಇನ್ನು, ಮಳೆಗಾದಲ್ಲಿ ಮುಂಬೈ, ಚೆನ್ನೈ ವಿಪರೀತ ಸಮಸ್ಯೆ ಎದುರಿಸುತ್ತವೆ. ಇಂತಹ ಯಾವುದೇ ಸಮಸ್ಯೆ ನಮ್ಮ ನಗರದಲ್ಲಿ ಇಲ್ಲ. ಇನ್ನು, ಕೋಲ್ಕತ್ತದ ಪರಿಸ್ಥಿತಿ ಹೇಳುವುದೇ ಬೇಡ ಎಂದು ಲೇವಡಿ ಮಾಡಿದ್ದಾರೆ.

ನಾವು ಹೈದರಾಬಾದ್ ನಗರವನ್ನು ಮಾಲಿನ್ಯ ಮುಕ್ತ ನಗರಿಯನ್ನಾಗಿ ಮಾಡಲಿದ್ದೇವೆ. ಅಷ್ಟೇ ಏಕೆ ನಮ್ಮ ಪ್ರತಿಸ್ಪರ್ಧಿ ಬೆಂಗಳೂರು, ಮುಂಬೈ ಅಲ್ಲ, ಸಿಂಗಪುರ, ಟೋಕಿಯೋ ಎಂದೂ ಹೇಳಿದರು.

ಹೈದರಾಬಾದ್ನಲ್ಲಿರುವ ಡಿಸೇಲ್ ಇತರ ಇಂಧನ ಆಧರಿತ 2 ಲಕ್ಷ ಆಟೊಗಳನ್ನು ಇವಿ ಆಟೊಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
.ಚಿಕ್ಕಬಳ್ಳಾಪುರ | ಹೈದರ್ ಡ್ರಾಪ್ ಇರುವ ‘ಹೈದರ್ ಅಲಿ ಬೆಟ್ಟ’.ಬೆಳಗಾವಿ | ಅಮೆರಿಕನ್ನರಿಗೆ ವಂಚನೆ: 33 ಆರೋಪಿಗಳ ಬಂಧನ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.