ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: 4,705 ಮಕ್ಕಳಷ್ಟೇ ದಾಖಲು

Last Updated 16 ಮಾರ್ಚ್ 2020, 21:13 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್‌ಟಿಇ)ಬಡ, ದುರ್ಬಲ ವರ್ಗದವರಿಗೆ ಉತ್ತಮ ಶಿಕ್ಷಣದ ಅವಕಾಶ ದೊರಕುತ್ತದೆ ಎಂಬ ಭಾವನೆ ಇದ್ದರೂ, ಕಳೆದ ವರ್ಷ ರಾಜ್ಯದಲ್ಲಿ ಈ ಕಾಯ್ದೆಯಡಿಯಲ್ಲಿ ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ ಕೇವಲ 4,705 ಎಂದು ಗೊತ್ತಾಗಿದೆ.

‘ನೆರೆಹೊರೆ ಶಾಲೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ ಹೊಸ ನಿಯಮಗಳಿಂದಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೇ ಮಕ್ಕಳನ್ನು ಸೇರಿಸಬೇಕಾಗಿದೆ. ಇಂತಹ ಶಾಲೆಗಳು ಇಲ್ಲದ ಕಡೆಯಲ್ಲಷ್ಟೇ ಖಾಸಗಿ ಶಾಲೆಗಳಿಗೆ ಸೇರಬಹುದಾಗಿದೆ. ಇದರಿಂದ ಸಾವಿರಾರು ಬಡ, ದುರ್ಬಲ ವರ್ಗದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವಂತಾಗಿದೆ’ ಎಂದುಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆಯ ಅಧ್ಯಕ್ಷ ಬಿ.ಎನ್‌.ಯೋಗಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಎನ್‌ಇಪಿಯತ್ತ ನಿರೀಕ್ಷೆ: ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಸರ್ಕಾರ ಜಾರಿಗೆ ತಂದರೆ ದೇಶದಾದ್ಯಂತ 18 ವರ್ಷದವರೆಗೂ ಉಚಿತ ಶಿಕ್ಷಣ ನೀಡುವುದು ಕಡ್ಡಾಯವಾಗುತ್ತದೆ. ಆಗ ಆರ್‌ಟಿಇ ಅನ್ನು 12ನೇ ತರಗತಿವರೆಗೂ ವಿಸ್ತರಿಸಬೇಕಾಗುತ್ತದೆ. ಆರ್‌ಟಿಇ ತಿದ್ದುಪಡಿ ಕಾಯ್ದೆಗೆಅಮೂಲಾಗ್ರ ಬದಲಾವಣೆ ತರಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಪುರಸ್ಕರಿಸಿ ತೀರ್ಪು ಪ್ರಕಟವಾದರೆಈ ಹಿಂದೆ ಇದ್ದಂತೆ 1.52 ಲಕ್ಷ ಸೀಟುಗಳನ್ನೂ ಆರ್‌ಟಿಇ ಮಕ್ಕಳಿಗೆ ನೀಡಬೇಕಾಗುತ್ತದೆ. ಹೀಗಾಗಿ ಎರಡೆರಡು ಆಶಯಗಳು ನಮ್ಮ ಮಂದಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT