ಶುಕ್ರವಾರ, ಸೆಪ್ಟೆಂಬರ್ 30, 2022
26 °C

ಹಾಂಗ್‌ಕಾಂಗ್‌ಗೆ ನೇರ ವಿಮಾನ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಗ್‌ಕಾಂಗ್‌ಗೆ ನೇರ ಸಂಪರ್ಕಕ್ಕಾಗಿ ಹೊಸ ವಿಮಾನ ಹಾರಾಟ  ನಡೆಸಲು ಕ್ಯಾಥೆ ಪೆಸಿಫಿಕ್ ವಿಮಾನ ಯಾನ ಕಂಪನಿ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್ 11ರಿಂದ ಹೊಸ ವಿಮಾನ ಹಾರಾಟ ಆರಂಭಿಸುವ ನಿರೀಕ್ಷೆ ಇದೆ.

ವಿಮಾನದ ಬಗ್ಗೆ ಮಾಹಿತಿ ನೀಡಿರುವ ನಿಲ್ದಾಣದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸತ್ಯಕಿ ರಘುನಾಥ್‌, ‘ದೇಶದ ಅತಿ ದೊಡ್ಡ ನಿಲ್ದಾಣಗಳಲ್ಲಿ ನಮ್ಮ ಬೆಂಗಳೂರು ನಿಲ್ದಾಣವೂ ಒಂದು. ಇದೀಗ ಹಾಂಗ್‌ಕಾಂಗ್‌ಗೆ ನೇರವಾಗಿ ಸಂಪರ್ಕ ಸಾಧಿಸಲು ಹೊಸ ವಿಮಾನ ಹಾರಾಟ ಆರಂಭವಾಗುತ್ತಿರುವುದು ಖುಷಿಯ ವಿಷಯ’ ಎಂದರು.

‘ಕ್ಯಾಥೆ ಪೆಸಿಫಿಕ್‌ ಕಂಪನಿಯ ಬೋಯಿಂಗ್‌ 777-300 ಎರಡು ವಿಮಾನಗಳು ತಡೆರಹಿತ ಹಾರಾಟ ನಡೆಸಲಿವೆ. ಪ್ರತಿ ವಿಮಾನದಲ್ಲಿ ಎಕನಾಮಿಕ್‌, ಪ್ರೀಮಿಯಂ ಎಕನಾಮಿಕ್‌ ಹಾಗೂ ಬ್ಯುಸಿನೆಸ್‌ ಕ್ಲಾಸ್‌ ಎಂಬ ಮೂರು ಕ್ಯಾಬಿನ್‌ಗಳಿವೆ. ಮುಂಬೈ ಹಾಗೂ ದೆಹಲಿಯಿಂದ ಮಾತ್ರ ಹಾಂಗ್‌ಕಾಂಗ್‌ಗೆ ನೇರ ಸಂಪರ್ಕವಿತ್ತು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು