ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಬಿಡುಗಡೆ: ನೂರು ಮುಸ್ಲಿಂ ಮಹಿಳೆಯರ ಸಾಧನೆಯ ಕಥನ

‘ರೈಸಿಂಗ್ ಬಿಯಾಂಡ್‌ ದಿ ಸೀಲಿಂಗ್’
Last Updated 25 ಫೆಬ್ರುವರಿ 2023, 16:41 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 100 ಮುಸ್ಲಿಂ ಮಹಿಳೆಯರ ಕಥನಗಳನ್ನು ಒಳಗೊಂಡ ಪುಸ್ತಕ ‘ರೈಸಿಂಗ್ ಬಿಯಾಂಡ್ ದಿ ಸೀಲಿಂಗ್ ಕರ್ನಾಟಕ’ (ಆರ್‌ಬಿಟಿಸಿ) ಅನ್ನು ಅದೇ ಹೆಸರಿನ ಸಂಘಟನೆ ಹೊರತಂದಿದೆ.

ಕಾಂಗ್ರೆಸ್‌ ಮುಖಂಡರಾದ ಮಾರ್ಗರೇಟ್ ಆಳ್ವಾ ಅವರು ಕೃತಿಯನ್ನು ಬಿಡುಗಡೆ ಮಾಡಿದರು. ರಾಜಕೀಯ, ಕಲೆ ಮತ್ತು ಸಾಮಾಜಿಕ ಕಾರ್ಯಗಳೂ ಸೇರಿ ಹದಿನಾಲ್ಕು ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮುಸ್ಲಿಂ ಮಹಿಳಾ ಸಾಧಕರ ಬದುಕನ್ನು ಈ ಪುಸ್ತಕ ಗೌರವಿಸಿದೆ.

ಆರ್‌ಬಿಟಿಸಿ ಸಂಯೋಜಕ ಜೋಯಾ ಫತೇಹಳ್ಳಿ ಮತ್ತು ಐಮನ್ ಅನ್ಸಾರಿ ಅವರು 18 ತಿಂಗಳ ಅವಧಿಯಲ್ಲಿ ಈ ಪುಸ್ತಕ ರಚಿಸಿದ್ದಾರೆ. 2022ರ ನವೆಂಬರ್ 1ರಂದು ಇ–ಪುಸ್ತಕ ಬಿಡುಗಡೆಯಾಗಿತ್ತು.

‘ರಾಷ್ಟ್ರ ನಿರ್ಮಾಣಕ್ಕೆ ದೇಶದಲ್ಲಿ ಮುಸ್ಲಿಂ ಮಹಿಳೆಯರು ನೀಡುತ್ತಿರುವ ಕೊಡುಗೆ ಮತ್ತು ಮುಸ್ಲಿಂ ಮಹಿಳೆಯರ ಬದುಕಿನ ವೈವಿಧ್ಯವನ್ನು ಹೇಳುವುದು ಈ ಪುಸ್ತಕದ ಉದ್ದೇಶ’ ಎಂದು ಆರ್‌ಬಿಟಿಸಿ ಸಂಸ್ಥಾಪಕಿ ಫರಾ ಉಸ್ಮಾನಿ ಹೇಳಿದರು.

‘ಭಾರತೀಯ ಮುಸ್ಲಿಂ ಮಹಿಳೆಯರು ಸಂಕುಚಿತ ದೃಷ್ಟಿಕೋನವನ್ನು ಮೀರಲು ಈ ಕೃತಿ ಸಹಾಯ ಮಾಡುತ್ತದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ’ ಎಂದು ಐಎಎಫ್ ಮಾಜಿ ವಿಂಗ್ ಕಮಾಂಡರ್ ಫರಾಹ್ ಅಫ್ರಾಜ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT