ಗುರುವಾರ , ಡಿಸೆಂಬರ್ 5, 2019
20 °C

ನಾಗಮಂಗಲ ಬಳಿ ಅಪಘಾತ: 8 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ತಾಲ್ಲೂಕಿನ ದೊಡ್ಡಜಟಕ ಗೇಟ್‌ ಬಳಿ ಚಾಮರಾಜನಗರ– ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಟಾಟಾ ಸುಮೊ ಮತ್ತು ಟೆಂಪೊ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.

ಅಲ್-ಫಲ್ಲಾ ಬ್ಯಾಂಕ್ ಮಾಸಿಕ ಸಭೆ ಮುಗಿಸಿ ಕುಣಿಗಲ್ ಸಮೀಪದ ತಾಜ್ ಹೋಟೆಲ್ ನಲ್ಲಿ ಊಟ ಮಾಡಲು ಟಾಟಾ ಸುಮೋದಲ್ಲಿ ತೆರಳಿದ್ದಾಗ  ಅಪಘಾತ ಸಂಭವಿಸಿದೆ.  ಮೃತರನ್ನು ಬಾಕರ್ ಷರೀಫ್  (50), ತಾಹೀರ್ ಸುಲ್ತಾನ್ ಷರೀಫ್(30), ನೌಷದ್  ಮಕ್ಬೂಲ್ ಪಾಷ(45), ಹಸೀನ್ ತಾಜ್  ಖಲೀಂ(50), ಮೆಹಬೂಬ್  ದಸ್ತರ್ ಖಾನ್(50), ಮಕ್ಸೂದ್  ಮಹಮ್ಮದ್ (25), ಅಕ್ಬರ್ ನಸೀಂ ಪಾಷಾ (40), ಶಾಹೇದಾ ಖಾನಂ (40) ಎಂದು ಗುರುತಿಸಲಾಗಿದೆ. ಮೃತಪಟ್ಟವರೆಲ್ಲರೂ ಅಲ್ ಫಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.

ನಾಗಮಂಗಲ ಕಡೆಯಿಂದ ಬೆಳ್ಳೂರು ಕ್ರಾಸ್ ಕಡೆಗೆ ಚಲಿಸುತ್ತಿದ್ದ ಟಾಟಾ ಸುಮೊಗೆ ನಾಗಮಂಗಲ ಕಡೆಗೆ ಬರುತ್ತಿದ್ದ ಟೆಂಪೊ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಡಿಕ್ಕಿಯ ರಭಸಕ್ಕೆ
ಟಾಟಾ ಸುಮೊ ಅರ್ಧ ಭಾಗ ಛಿದ್ರವಾಗಿದೆ. ಸುಮೊದಲ್ಲಿದ್ದ 7 ಜನರಲ್ಲಿ 4 ಜನ ಸ್ಥಳದಲ್ಲೇ ಅಸುನೀಗಿದ್ದಾರೆ. ಟೆಂಪೊ ಚಾಲಕ ಸೇರಿ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು