ಮಲಗಿದ್ದವನ ಮೈಮೇಲೆ ಹರಿದ ಬುಲೆರೊ

7

ಮಲಗಿದ್ದವನ ಮೈಮೇಲೆ ಹರಿದ ಬುಲೆರೊ

Published:
Updated:

ಬೆಂಗಳೂರು: ಬುಲೆರೊ ವಾಹನದ ಕೆಳಗೆ ಕಾರ್ಮಿಕ ಮಲಗಿರುವುದನ್ನು ಅರಿಯದೆ ವಾಹನ ಚಾಲೂ ಮಾಡಿದ್ದರಿಂದ ಚಕ್ರಕ್ಕೆ ಸಿಲುಕಿ ಆ ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಲೇಔಟ್‌ನಲ್ಲಿ ಕೇಬಲ್ ಅಳವಡಿಕೆ ಕೆಲಸ ನಡೆಯುತ್ತಿತ್ತು. ಆಂಧ್ರಪ್ರದೇಶದ ಸುಮಾರು 15 ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿದ್ದರು. ಕೆಲಸಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಬುಲೆರೊ ವಾಹನದಲ್ಲಿ ತರಲಾಗಿತ್ತು.

ಗುರುವಾರ ಸಂಜೆ ಸುಬ್ರಹ್ಮಣ್ಯ ಎಂಬ ಕಾರ್ಮಿಕ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಆ ವಾಹನದ ಕೆಳಗೇ ಮಲಗಿದ್ದರು. ಆತನನ್ನು ನೋಡದ ಚಾಲಕ, ಪಕ್ಕದ ರಸ್ತೆಗೆ ಸಲಕರಣೆ ಕೊಡುವುದಕ್ಕೆ ಹೋಗಲೆಂದು ವಾಹನ ಚಾಲು ಮಾಡಿದ್ದ. ಆಗ ಸುಬ್ರಹ್ಮಣ್ಯ ಕಾಲಿನ ಮೇಲೆ ಚಕ್ರಗಳು ಹರಿದಿದ್ದಲ್ಲದೆ, ಕೆಲ ಸಲಕರಣೆಗಳೂ ಆತನ ತಲೆ ಮೇಲೆ ಬಿದ್ದವು. ಕೂಡಲೇ ಗಾಯಾಳುವನ್ನು ಗೊಟ್ಟಿಗೆರೆಯ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಪ್ರಾಥಮಿಕ ಚಿಕಿತ್ಸೆ ‍ಪಡೆದು ವಾಪಸಾಗಿದ್ದ ಆತ, ಪುನಃ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !