ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಹಬ್ಬದ ದಿನವೇ ಅಪಘಾತ | ಯುವತಿ ಸಾವು, ತುಂಡಾದ ಯುವಕನ ಕೈ

ಯಲಹಂಕ: ಹುಟ್ಟುಹಬ್ಬದ ದಿನವೇ ಅಪಘಾತ
Last Updated 18 ಅಕ್ಟೋಬರ್ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಸನಾ ಸಾಹೇಬ್ (18) ಎಂಬುವರು ಮೃತಪಟ್ಟಿದ್ದಾರೆ. ಬೈಕ್ ಸವಾರ ಜಿಶ್ಯಾನ್ (18) ಎಂಬುವರ ಬಲಗೈ ತುಂಡಾಗಿದೆ.

‘ನಗರದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಿಶ್ಯಾನ್ ಅವರದ್ದು ಮಂಗಳವಾರ ಹುಟ್ಟುಹಬ್ಬವಿತ್ತು. ಅದರ ಆಚರಣೆಗೆಂದು ಸ್ನೇಹಿತೆ ಸನಾ ಜೊತೆ ಬೈಕ್‌ನಲ್ಲಿ ಹೆಬ್ಬಾಳ ಕಡೆಯಿಂದ ದೇವನಹಳ್ಳಿಯತ್ತ ಹೊರಟಿದ್ದರು. ಯಲಹಂಕ ಜಂಕ್ಷನ್ ಬಳಿ ಮಧ್ಯಾಹ್ನ 1.30ರ ಸುಮಾರಿಗೆ ಬೈಕ್ ಉರುಳಿಬಿದ್ದು, ಈ ಅವಘಡ ಸಂಭವಿಸಿದೆ’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.

ಅತಿ ವೇಗದ ಚಾಲನೆ: ‘ಜಿಶ್ಯಾನ್ ಅವರು ಕೆಟಿಎಂ ಡ್ಯೂಕ್ ಬೈಕ್‌ (ಕೆಎ 04 ಜೆಬಿ 0146) ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಸನಾ ಕುಳಿತಿದ್ದರು. ಜಿಶ್ಯಾನ್ ಅವರು ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದರು. ನಿಯಂತ್ರಣ ತಪ್ಪಿದ್ದ ಬೈಕ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಉರುಳಿ ಬಿದ್ದಿತ್ತು.’

‘ಬೈಕ್‌ನಿಂದ ಹಾರಿಬಿದ್ದಿದ್ದ ಸನಾ ಅವರ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ಅವರು ಸ್ಥಳದಲ್ಲೇ ಮೃತಪಟ್ಟರು. ರಸ್ತೆ ವಿಭಜಕದಲ್ಲಿದ್ದ ಕಬ್ಬಿಣದ ಕಂಬಕ್ಕೆ ತಾಗಿದ್ದರಿಂದ ಜಿಶ್ಯಾನ್ ಅವರ ಬಲಗೈ ತುಂಡರಿಸಿ ಬಿದ್ದಿತ್ತು. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಪ್ರಜ್ಞೆ ತಪ್ಪಿ ಬಿದ್ದಿದ್ದ ಜಿಶ್ಯಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT