ಮಂಗಳವಾರ, ಮಾರ್ಚ್ 31, 2020
19 °C

ದಿಣ್ಣೂರು ರಸ್ತೆ ವಿಸ್ತರಣೆ: ಭೂಸ್ವಾಧೀನಕ್ಕೆ ₹770 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದಿಣ್ಣೂರು ರಸ್ತೆಯಿಂದ ಡಾ.ಬಿ.ಆರ್‌.ಅಂಬೇಡ್ಕರ್ ಕಾಲೇಜಿನ ವರೆಗಿನ ರಸ್ತೆ ವಿಸ್ತರಣೆಯ ಕಾಮಗಾರಿ ಮೊತ್ತ ₹65 ಕೋಟಿ. ಆದರೆ, ಭೂಸ್ವಾಧೀನಕ್ಕೆ ₹770 ಕೋಟಿ ಪಾವತಿಸಬೇಕಿದೆ. ಅಷ್ಟು ಹಣವನ್ನು ಎಲ್ಲಿಂದ ತರುವುದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಡಿಆರ್ ಪಡೆಯಲು ಭೂಮಾಲೀಕರು ನಿರಾಕರಿಸುತ್ತಿದ್ದಾರೆ. ಮೆಟ್ರೊ ಯೋಜನೆಯಲ್ಲಿ ನೀಡಿರುವಂತೆ ನಗದು ರೂಪದಲ್ಲಿ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ’ ಎಂದರು.

‘ಈ ರಸ್ತೆಯನ್ನು 24 ಮೀಟರ್‌ ವಿಸ್ತರಣೆ ಮಾಡಬೇಕಿದೆ. ಅದಕ್ಕಾಗಿ 601 ಸ್ವತ್ತುಗಳನ್ನು ಗುರುತಿಸಿದ್ದು, 598 ಖಾಸಗಿ ಸ್ವತ್ತುಗಳಾಗಿವೆ. 43,033 ಚದರ ಮೀಟರ್ ಭೂಸ್ವಾಧೀನ ಮಾಡಬೇಕಿದೆ’ ಎಂದರು. ಭೂಮಾಲೀಕರು ಟಿಡಿಆರ್‌ಗೆ ಒಪ್ಪಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು