ನಂದಿದುರ್ಗ ರಸ್ತೆಗೆ ‘ವಿ.ಪಿ ದೀನದಯಾಳು ನಾಯ್ಡು ರಸ್ತೆ’ ನಾಮಕರಣ

7

ನಂದಿದುರ್ಗ ರಸ್ತೆಗೆ ‘ವಿ.ಪಿ ದೀನದಯಾಳು ನಾಯ್ಡು ರಸ್ತೆ’ ನಾಮಕರಣ

Published:
Updated:
Deccan Herald

ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟಗಾರ, ವಕೀಲ, ರಾಜಕಾರಣಿಯಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ ವಿ.ಪಿ.ದೀನದಯಾಳು ನಾಯ್ಡು ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯ’ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ ಹೇಳಿದರು.

ನಗರದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಆಯೋಜಿಸಿದ್ದ ನಂದಿದುರ್ಗ ರಸ್ತೆಗೆ ವಿ.ಪಿ.ದೀನದಯಾಳು ನಾಯ್ಡು ರಸ್ತೆ ನಾಮಕರಣ ಸಮಾರಂಭದಲ್ಲಿ ಅವರು ಮಾತನಾಡಿದರು.   

‘ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನ, ಕೌಶಲಯುಕ್ತ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ನಗರದ ಎಲ್ಲ ಉದ್ಯಾನಗಳಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು’ ಎಂದರು. 

‘ದೆಹಲಿಯ ರಸ್ತೆಯೊಂದಕ್ಕೆ ದೀನದಯಾಳು ಅವರ ಹೆಸರಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರೊಂದಿಗೆ ಮಾತನಾಡಲಿದ್ದೇನೆ. ಮುಂಬರುವ ನಾಲ್ಕೈದು ವರ್ಷಗಳಲ್ಲಿ ನಗರದಲ್ಲಿ ಕೊಂಡಜ್ಜಿ ಬಸಪ್ಪ ಮತ್ತು ದೀನದಯಾಳು ಅವರ ಹೆಸರಲ್ಲಿ ‘ವಿಶ್ವ ಜಾಂಬೂರಿ’ ನಡೆಸುವ ಉದ್ದೇಶವಿದೆ’ ಎಂದು ತಿಳಿಸಿದರು.

‘ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಕರ್ನಾಟಕ ವಿಶ್ವಕ್ಕೆ ಮಾದರಿಯಾಗಬೇಕೆನ್ನುವ ಉದ್ದೇಶದಿಂದ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿದ್ದೇನೆ, ಅವರೂ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.

‘ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಸಕಲ ಅಭಿವೃದ್ಧಿಗೆ ನಾನು ಸಿದ್ಧನಿದ್ದೇನೆ. ಯಾವಾಗ ಬೇಕಾದರೂ ನಾನು ನಿಮ್ಮ ಸಹಾಯಕ್ಕೆ ಲಭ್ಯವಿರುತ್ತೇನೆ’ ಎಂದು ಬಿಬಿಎಂಪಿಯ ಮೇಯರ್‌ ಆರ್‌.ಸಂಪತ್‌ರಾಜ್‌ ಭರವಸೆ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !