ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ದಿನ: ಕೆಂಗುಲಾಬಿಗೆ ಭರ್ಜರಿ ಬೇಡಿಕೆ- ದರ ಗಣನೀಯ ಏರಿಕೆ

ಐಎಫ್‌ಎಬಿಯಿಂದ ಪೂರೈಕೆ ಆಗುವ ಗುಲಾಬಿಯ ದರ ಗಣನೀಯ ಏರಿಕೆ
Last Updated 8 ಫೆಬ್ರುವರಿ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರೇಮಿಗಳ ದಿನ’ ಸಮೀಪಿಸುತ್ತಿರುವುದರಿಂದ ಕೆಂಗುಲಾಬಿಗೆ ಬೇಡಿಕೆ ಹೆಚ್ಚಾಗಿದೆ.ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಿಂದ (ಐಎಫ್‌ಎಬಿ) ಹೊರ ರಾಜ್ಯಗಳಿಗೆ ಪೂರೈಕೆಯಾಗುತ್ತಿರುವ ಕೆಂಗುಲಾಬಿಯ ದರ ವಾರದಿಂದ ನಿರಂತರವಾಗಿ ಏರಿಕೆ ಕಂಡಿದೆ.

ಹೆಬ್ಬಾಳದಲ್ಲಿರುವ ಐಎಫ್‌ಎಬಿ ಕೇಂದ್ರಕ್ಕೆ ರಂಗು ರಂಗಿನ ಗುಲಾಬಿಗಳು ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿವೆ.ಹೈದರಾಬಾದ್, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆಪ್ರತಿನಿತ್ಯ ಲಕ್ಷಾಂತರ ಗುಲಾಬಿಗಳು ಈ ಕೇಂದ್ರದಿಂದ ಪೂರೈಕೆಯಾಗುತ್ತಿವೆ.

ಫೆ.14ರ ಪ್ರೇಮಿಗಳ ದಿನಕ್ಕೆ ದಿನಗಣನೆ ಆರಂಭವಾಗಿದ್ದು, ಪೂರೈಕೆಯಾಗುವ ಗುಲಾಬಿ ಹೂಗಳ ಸಂಖ್ಯೆಯೂ ದುಪ್ಪ
ಟ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರವೂ ಏರಿದೆ. ಎರಡು ವರ್ಷದಿಂದ ಕೋವಿಡ್‌ ಸ್ಥಿತಿಯಿಂದಾಗಿ ಮಂಕಾಗಿದ್ದ ಗುಲಾಬಿ ಹೂವಿನ ವಹಿವಾಟು ಗರಿಗೆದರಿದೆ.

‘ನವೆಂಬರ್‌ನಿಂದ ಫೆಬ್ರುವರಿ ಅವಧಿಯಲ್ಲಿ ಗುಲಾಬಿ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆಯಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸುಮಾರು 2 ಲಕ್ಷ ಗುಲಾಬಿಗಳು ಕೇಂದ್ರದಿಂದ ಬೇರೆ ಸ್ಥಳಗಳಿಗೆ ತಲುಪುತ್ತವೆ. ಈ ವಾರ ಪೂರೈಕೆ ಪ್ರಮಾಣ ದುಪ್ಪಟ್ಟಾಗಿದೆ. ಈ ಪ್ರೇಮಿಗಳ ದಿನಕ್ಕೆ ಸುಮಾರು 6 ಲಕ್ಷ ಗುಲಾಬಿ ಪೂರೈಕೆಯಾಗಬಹುದು’ ಎಂದುಐಎಫ್‌ಎಬಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಹೌಸ್‌ಗಳಲ್ಲಿ (ಹಸಿರುಮನೆ) ಬೆಳೆಯಲಾಗುವ ಗುಲಾಬಿಗಳ ಪೂರೈಕೆಗೆ ಕೇಂದ್ರ ವೇದಿಕೆಯಾಗಿದೆ. ಕಳೆದ ವರ್ಷದ ಪ್ರೇಮಿಗಳ ದಿನದ ಸಮಯದಲ್ಲಿ ಕೆಂಗುಲಾಬಿಯೊಂದರ ದರ ಗರಿಷ್ಠ ₹33ರಂತೆ ಹರಾಜಿನಲ್ಲಿ ಮಾರಾಟವಾಗಿತ್ತು. ಈ ಪ್ರೇಮಿಗಳ ದಿನಕ್ಕೆ ಗುಲಾಬಿಯೊಂದರ ದರ ಗರಿಷ್ಠ ₹40ಕ್ಕೆ ಏರುವ ನಿರೀಕ್ಷೆ ಇದೆ’ ಎಂದರು.

ವಾರದವರೆಗೆ ತಾಜಾತನ: ‘ವಿಶೇಷ ಗುಣವುಳ್ಳ ಈ ಗುಲಾಬಿಗಳು ಕಟಾವು ಆದ ಬಳಿಕ ಗರಿಷ್ಠ 7 ದಿನ ಇಡಬಹುದು. ಹೂವಿನ ಕಾಂಡವನ್ನು ನಿತ್ಯ ಒಂದು ಸೆಂ.ಮೀ ಕಟಾವು ಮಾಡಿ ನೀರಿನಲ್ಲೇ ಇಡುವುದರಿಂದ ಒಂದು ವಾರ ತಾಜಾತನದಿಂದ ಕೂಡಿರುತ್ತದೆ. ಹರಾಜು ಪ್ರಕ್ರಿಯೆ ನಂತರಬೇರೆ ಸ್ಥಳಗಳಿಗೆ ಪೂರೈಸಲಾಗುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಗುಲಾಬಿಗಳನ್ನು ತಾಜಾ ಸ್ಥಿತಿಯಲ್ಲಿಡುವ ಶೀತಲೀಕರಣ ವ್ಯವಸ್ಥೆ ಕೇಂದ್ರದಲ್ಲಿದೆ’ ಎಂದು ಐಎಫ್‌ಎಬಿ ಸಿಬ್ಬಂದಿ ವಿವರಿಸಿದರು.

‘ಪ್ರೇಮಿಗಳ ದಿನಕ್ಕೆ ಕರ್ನಾಟಕದಿಂದ ಸುಮಾರು 50 ಲಕ್ಷ ಗುಲಾಬಿ ರಫ್ತಾಗುತ್ತಿತ್ತು. ಆದರೆ, ಕಳೆದ ವರ್ಷ ವಿಮಾನದಲ್ಲಿ ಸಾಗಣೆ ದರ ಶೇ 40ರಷ್ಟು ಏರಿದೆ. ಗುಲಾಬಿ ಖರೀದಿಗೆ ವಿದೇಶಿ ಖರೀದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT