ಮಂಗಳವಾರ, ಜೂನ್ 15, 2021
26 °C

‘ರೋಟರಿ ವಾರ್‌ರೂಮ್’ ಪ್ರತಿದಿನ 2 ಸಾವಿರ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ನೆರವು ನೀಡಲು ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಲು ರೋಟರಿ (ಡಿಸ್ಟ್ರಿಕ್ಟ್ 3190) ವತಿಯಿಂದ ವಾರ್‌ರೂಮ್ ತೆರೆಯಲಾಗಿದ್ದು, ನಿತ್ಯವೂ ಸುಮಾರು 2,000 ಮಂದಿ ಕರೆ ಮಾಡುತ್ತಿದ್ದಾರೆ.

ರೋಟರಿ ಗವರ್ನರ್ ಬಿ.ಎಲ್. ನಾಗೇಂದ್ರ ಪ್ರಸಾದ್ ಅವರು ದಿನದ 24 ಗಂಟೆಯೂ ವಾರ್‌ರೂಮ್‌ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಿದ್ದಾರೆ. 250ಕ್ಕೂ ಹೆಚ್ಚು ಸ್ವಯಂಸೇವಕರು ವಾರ್‌ರೂಮ್‌ಗಾಗಿ ಕೆಲಸ ಮಾಡುತ್ತಿದ್ದಾರೆ.

‘ಎರಡನೇ ಅಲೆಯ ಪರಿಣಾಮ ಹೆಚ್ಚಾಗಿದ್ದು, ಇಂಥ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ವಾರ್‌ರೂಮ್‌ ತೆರೆಯಲಾಗಿದೆ. ಅಮೆರಿಕದ ವೈದ್ಯರ ಜೊತೆಯೂ ಸಂಪರ್ಕವಿಟ್ಟುಕೊಳ್ಳಲಾಗಿದೆ. ಅವರ ಮೂಲಕವೂ ಜನರಿಗೆ ಸಲಹೆ ಕೊಡಿಸಲಾಗುತ್ತಿದೆ’ ಎಂದು ನಾಗೇಂದ್ರ ಪ್ರಸಾದ್ ಹೇಳಿದರು.

‘ವಾರ್‌ರೂಮ್‌ಗೆ ಕರೆ ಮಾಡುತ್ತಿದ್ದಂತೆ ಇಂಗ್ಲಿಷ್ ಹಾಗೂ ಕನ್ನಡ ಆಯ್ಕೆ ನೀಡಲಾಗಿದೆ. ಭಾಷೆ ಆಯ್ಕೆ ಮಾಡಿಕೊಂಡರೆ, ಬಿಡುವಿರುವ ಸ್ವಯಂಸೇವಕರಿಗೆ ಕರೆ ಹೋಗಲಿದೆ. ಅವರೇ ಜನರ ಸಮಸ್ಯೆಯನ್ನು ಆಲಿಸಿ ಸಹಾಯ ಮಾಡಲಿದ್ದಾರೆ’ ಎಂದೂ ತಿಳಿಸಿದರು.

ರೋಟರಿ ಸಂಘಟನಾ ಕಾರ್ಯದರ್ಶಿ ಎಲಿಜಬೆತ್ ಚೆರಿಯನ್ ಪರಮೇಶ್, ‘ವಾರ್‌ರೂಮ್‌ಗೆ ಬಿಬಿಎಂಪಿ ಕಡೆ
ಯಿಂದಲೂ ಪ್ರಶಂಸೆ ಸಿಕ್ಕಿದೆ’ ಎಂದರು.

‘ಮೊದಲ ಅಲೆಯಲ್ಲೂ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಾಗಿ ಬಸವೇಶ್ವರ ನಗರದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲಾಗಿತ್ತು. ಇದೀಗ ವಾರ್‌ರೂಮ್‌ ಮೂಲಕ ಸಹಾಯ ಮಾಡುತ್ತಿದ್ದು, ಎಲ್ಲರ ಸಹಕಾರ ನಮ್ಮ ಕೆಲಸಕ್ಕಿದೆ’ ಎಂದೂ ತಿಳಿಸಿದರು.

100 ಹಾಸಿಗೆಗಳ ಎರಡು ಆಸ್ಪತ್ರೆ: ‘ದೂರವಾಣಿ ನಗರ ಹಾಗೂ ಮಲ್ಲೇಶ್ವರದಲ್ಲಿ ತಲಾ 100 ಹಾಸಿಗೆಗಳ ಆಸ್ಪತ್ರೆ ಆರಂಭಿಸುವ ಪ್ರಕ್ರಿಯೆಯೂ ನಡೆದಿದೆ’ ಎಂದು ನಾಗೇಂದ್ರ ಪ್ರಸಾದ್ ಹೇಳಿದರು. 

ವಾರ್‌ ರೂಮ್ ಕೆಲಸ

*ಸೋಂಕಿತರು ಹಾಗೂ ಅವರ ಕುಟುಂಬದವರಿಗೆ ಆಪ್ತ ಸಮಾಲೋಚನೆ

*ಹಾಸಿಗೆ, ಪ್ಲಾಸ್ಮಾ ದಾನ, ಆಂಬುಲೆನ್ಸ್, ಆಮ್ಲಜನಕ ಹಾಗೂ ಔಷಧಿ ಬಗ್ಗೆ ಮಾಹಿತಿ

ವಾರ್‌ ರೂಮ್ ಸಂಪರ್ಕಕ್ಕೆ: 

98118 04401 ಅಥವಾ ಇ–ಮೇಲ್: 3190covidwarroom@gmail.com

ಜಾಲತಾಣ: covid19.rotarydistrict3190.org

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು