ಸೋಮವಾರ, ಮೇ 23, 2022
22 °C

ನೇಪಾಳದಲ್ಲಿ ರೌಡಿ ಕರಿಯ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕುಖ್ಯಾತ ರೌಡಿ ಸೈಕಲ್ ರವಿ, ಆತನ ಸಹಚರ ಬೇಕರಿ ರಘು ಹಾಗೂ ಸಿನಿಮಾ ನಿರ್ಮಾಪಕ ಉಮಾಪತಿ ಅವ
ರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ರೌಡಿ ಕರಿಯ ಅಲಿಯಾಸ್ ರಾಜೇಶ್‌ನನ್ನು ಜಯನಗರ ಪೊಲೀಸರು ನೇಪಾಳದಲ್ಲಿ ಬಂಧಿಸಿದ್ದಾರೆ.

‘ಮಾರಕಾಸ್ತ್ರಗಳ ಸಮೇತ ಕೊಲೆ ಮಾಡಲು ಸಜ್ಜಾಗಿದ್ದ ರೌಡಿ ಬಾಂಬೆ ರವಿ ಗ್ಯಾಂಗ್ ಮೇಲೆ 2020ರ ಡಿಸೆಂಬರ್ 20ರಂದು ನ್ಯಾಷನಲ್ ಕಾಲೇಜು ಬಳಿ ದಾಳಿ ಮಾಡಲಾಗಿತ್ತು. ಕೆಲ ಆರೋಪಿಗಳು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಂಬೆ ರವಿಯ ಸಹಚರ ಕರಿಯ, ನೇಪಾಳಕ್ಕೆ ಹೋಗಿ ತಲೆಮರೆಸಿಕೊಂಡಿ
ದ್ದ. ಈ ಬಗ್ಗೆ ಮಾಹಿತಿ ಪಡೆದ ವಿಶೇಷ
ತಂಡವು ನೇಪಾಳಕ್ಕೆ ಹೋಗಿ ಆರೋಪಿ
ಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.’

‘ಕೆ.ಜಿ.ನಗರ ನಿವಾಸಿಯಾಗಿದ್ದ ಕರಿಯ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ಜೀವ ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೆ.ಜಿ. ನಗರ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿತ್ತು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು