ಯಶವಂತಪುರ ಬಳಿ ಮಚ್ಚಿನಿಂದ ಕೊಚ್ಚಿ ರೌಡಿ ಕೊಲೆ

ಶುಕ್ರವಾರ, ಜೂನ್ 21, 2019
22 °C

ಯಶವಂತಪುರ ಬಳಿ ಮಚ್ಚಿನಿಂದ ಕೊಚ್ಚಿ ರೌಡಿ ಕೊಲೆ

Published:
Updated:

ಬೆಂಗಳೂರು: ಯಶವಂತಪುರ ಬಳಿಯ ಜಾಮಿಯಾ ಮಸೀದಿ ಸಮೀಪದಲ್ಲಿ ರೌಡಿ ವಿಜಯ್ ಅಲಿಯಾಸ್ ವಿಜಿ ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

‘ನಂ‌ದಿನಿ ಲೇಔಟ್ ಠಾಣೆಯ ರೌಡಿಶೀಟರ್ ಆಗಿದ್ದ ವಿಜಯ್, ಊಟಕ್ಕೆಂದು ಸ್ನೇಹಿತರ ಜೊತೆ ಶುಕ್ರವಾರ ತಡರಾತ್ರಿ ಯಶವಂತಪುರಕ್ಕೆ ಬಂದಿದ್ದ. ಶನಿವಾರ ನಸುಕಿನಲ್ಲಿ ಮನೆಗೆ ವಾಪಸ್ ಹೊರಟಿದ್ದಾಗ ಆತನ ಜೊತೆ ಜಗಳ ತೆಗೆದಿದ್ದ ಸ್ನೇಹಿತರೇ ಈ ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಕೊಲೆಯಲ್ಲಿ ಅಂತ್ಯವಾದ ಗಲಾಟೆ: ‘ಊಟ ಮುಗಿದ ಬಳಿಕ ಸ್ನೇಹಿತರೆಲ್ಲರೂ ಪರಸ್ಪರ ಮಾತನಾಡುತ್ತ ನಿಂತಿದ್ದರು. ಅದೇ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ವಿಜಯ್ ಹಾಗೂ ಸ್ನೇಹಿತರ ಜೊತೆ ಜಗಳ ಶುರುವಾಗಿತ್ತು. ಅದು ವಿಕೋಪಕ್ಕೆ ಹೋಗುತ್ತಿದ್ದಂತೆ ಕೈ ಕೈ ಮಿಲಾಯಿಸಿದ್ದರು. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ವಿಜಯ್‌ನನ್ನು ಮುಗಿಸಿಯೇ ಬಿಡೋಣ’ ಎಂದು ಕೂಗಾಡುತ್ತಿದ್ದ ಸ್ನೇಹಿತರು, ತಮ್ಮ ಇತರೆ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಎಲ್ಲರೂ ಸೇರಿ ನಡುರಸ್ತೆಯಲ್ಲೇ ವಿಜಯ್‌ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದಿದ್ದರು.’

‘ತೀವ್ರ ರಕ್ತಸ್ರಾವದಿಂದಾಗಿ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕೊಲೆಯಲ್ಲಿ ಕಿರಿಕ್ ಮಂಜ ಹಾಗೂ ಸಹಚರರ ಕೈವಾಡವಿರುವ ಶಂಕೆ ಇದ್ದು, ಅವರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !