ಭಾನುವಾರ, ಫೆಬ್ರವರಿ 28, 2021
31 °C

ರಾಮಮಂದಿರ: ದೇಣಿಗೆ ಸಂಗ್ರಹಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಕನ್ನಲ್ಲಿ ಮಹಾಂತ ಮಠದ ಶ್ರೀ ರೇಣುಕಾಶಿವಾಚಾರ್ಯ ಸ್ವಾಮೀಜಿ ಕನ್ನಲ್ಲಿಯಲ್ಲಿ ಚಾಲನೆ ನೀಡಿದರು.

ಕನ್ನಲ್ಲಿಯ ಶ್ರೀ ವೀರಭದ್ರಸ್ವಾಮಿ ನಿತ್ಯಾನ್ನ ದಾಸೋಹ ಸಮಿತಿಯ ಅಧ್ಯಕ್ಷ ಡಾ.ಎಸ್.ಶಾಂತರಾಜು ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಅವರು ₹1.11 ಲಕ್ಷ, ಬಿಜೆಪಿ ಮುಖಂಡ ಡಾ.ಎನ್.ನಂಜುಂಡೇಶ್ ಅವರು ₹1 ಲಕ್ಷ ಮೊತ್ತದ ಚೆಕ್‌ ನೀಡಿದರು.

ಆರ್‌ಎಸ್‍ಎಸ್‍ನ ಕಾಂತರಾಜು, ‘ರಾಮಮಂದಿರವು ಒಂದು ಜಾತಿ, ಪಕ್ಷಕ್ಕೆ ಸೀಮಿತವಾಗದೆ ಹಿಂದೂ ಧರ್ಮದ ಸಂಕೇತವಾಗಬೇಕು’ ಎಂದರು.

ಡಾ.ಎನ್.ನಂಜುಂಡೇಶ್, ‘ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಭಾರತೀಯ ಇತಿಹಾಸವನ್ನು ರಕ್ಷಿಸಬೇಕು’ ಎಂದರು.

ಆರ್‌ಎಸ್‍ಎಸ್ ಪ್ರಚಾರಕಿ ಪೂರ್ಣಿಮಾ, ‘ಮಹಿಳೆಯರು ಆರ್‌ಎಸ್‍ಎಸ್ ಸೇರುವ ಮೂಲಕ ಹಿಂದುತ್ವ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದರು.

ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್‍ರಾಜ್, ಸಿದ್ದಲಿಂಗಸ್ವಾಮಿ, ಸುರೇಶ್ ಬಿ.ಪಿ, ಗಂಗರಾಜಮ್ಮ, ಸಾವಿತ್ರಮ್ಮ, ಚಂದ್ರಶೇಖರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು