ಬೆಂಗಳೂರು: ಮಾದಕ ದ್ರವ್ಯ ನಿಯಂತ್ರಣ ಬ್ಯೂರೊದ 41ನೇ ಸ್ಥಾಪನಾ ದಿನವನ್ನು ‘ನಶಾ ಮುಕ್ತ ಭಾರತ’ ಅಭಿಯಾನದ ಅಡಿಯಲ್ಲಿ ಮಾದಕ ದ್ರವ್ಯ ದುರುಪಯೋಗ ಜಾಗೃತಿ ಕಾರ್ಯಕ್ರಮವನ್ನು ಆರ್ಆರ್ಎಂಸಿಎಚ್ ಆಚರಿಸಲಾಯಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೊ ಮತ್ತು ದಿಶಾಬೋಧ್ ಫೌಂಡೇಶನ್ ಸಹಯೋಗದೊಂದಿಗೆ ರಾಜರಾಜೇಶ್ವರಿ ಸಮೂಹ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

‘ಮಾದಕ ವಸ್ತುಗಳ ಬಳಕೆ ಬೇಡ’ ಎಂಬ ಸಂದೇಶವನ್ನು ಪ್ರಚಾರ ಮಾಡುವುದರ ಜೊತೆಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್ ನಡೆಯಿತು. ಗಣ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

‘ನಶಾ ಮುಕ್ತ ಭಾರತ - ಯುವ ಶುದ್ಧಿ ಅಭಿಯಾನ’ದಲ್ಲಿ ಆರ್ಆರ್ಎಂಸಿಎಚ್ ಒಪ್ಪಂದವನ್ನು ವಿವರಿಸಿದರು. 13 ಜಿಲ್ಲೆಗಳಲ್ಲಿ 16 ಕಾರ್ಯಕ್ರಮಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. 77,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 1,500 ಶಿಕ್ಷಕರನ್ನು ತಲುಪಲಾಯಿತು. ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಪ್ರತಿಜ್ಞೆ ಮಾಡುವಂತೆ, ಆರೋಗ್ಯಕರ ಕ್ಯಾಂಪಸ್ ಅನ್ನು ಉತ್ತೇಜಿಸಲಾಯಿತು. ಸುಮಾರು 12,000 ವಿದ್ಯಾರ್ಥಿಗಳು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದರು ಎಂದು ಮಾಹಿತಿ ನೀಡಲಾಯಿತು.

ದಿಶಾಬೋಧ್ ಫೌಂಡೇಶನ್ ಎನ್ಸಿಬಿಯ ಸಬ್-ಇನ್ಸ್ಪೆಕ್ಟರ್ ವಿಕಾಸ್ ಸಿಂಗ್, ದಿಶಾಬೋಧ್ ಫೌಂಡೇಶನ್ನ ಕಾಂತಿ ಶೆಟ್ಟಿ, ಸಂಸ್ಥಾಪಕ ಅಧ್ಯಕ್ಷ ಡಾ. ಎ.ಸಿ. ಷಣ್ಮುಗಂ, ಅಧ್ಯಕ್ಷ ಎ.ಸಿ.ಎಸ್. ಅರುಣ್ ಕುಮಾರ್, ಅಧ್ಯಕ್ಷೆ ಲಲಿತಾ ಲಕ್ಷ್ಮಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಾನಂದ್, ಸಿಇಒ ಸೀತಾರಾಮ್, ಡೀನ್ ಡಾ. ಸತ್ಯಮೂರ್ತಿ, ಪ್ರಾಂಶುಪಾಲ ಡಾ. ಬಸವರಾಜ ಭಂಡಾರೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.