ಶನಿವಾರ, ಏಪ್ರಿಲ್ 10, 2021
29 °C

ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಮಹಾಸಭಾ ಆರಂಭ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರೂಪಣೆ ಹಾಗೂ ನಿರ್ಣಯ ತೆಗೆದುಕೊಳ್ಳುವ ಎರಡು ದಿನಗಳ  ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಚನ್ನೇನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.

ಸರ ಸಂಘಚಾಲಕ್ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ( ಭೈಯಾಜೀ) ಜೋಶಿ ಅವರು ಎಬಿಪಿಎಸ್ ಉದ್ಘಾಟಿಸಿದರು. 

ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ, ಸುರೇಶ್ ಸೋನಿ, ಕೃಷ್ಣಗೋಪಾಲ್, ಭಾಗಯ್ಯ ಸೇರಿದಂತೆ ಬಿಜೆಪಿ, ವಿಶ್ವಹಿಂದು ಪರಿಷತ್, ಎಬಿವಿಪಿ, ವಿದ್ಯಾಭಾರತಿ, ಸೇವಾ ಭಾರತಿ ಮತ್ತಿತರ  ಸಂಘಪರಿವಾರದ ಸಂಘಟನೆಗಳ ಸುಮಾರು 450 ಪ್ರತಿನಿಧಿಗಳು ಸಭಾದಲ್ಲಿ ಭಾಗವಹಿಸಿದ್ದಾರೆ. ಶನಿವಾರವೂ ಎಬಿಪಿಎಸ್ ನಡೆಯಲಿದೆ.

ಸಂಘ ಶಾಖೆಯ ವಿಸ್ತಾರ ಸೇರಿದಂತೆ ವಿವಿಧ ಚಟುವಟಿಕೆಯ ವರದಿ, ಮುಂದಿನ ಕಾರ್ಯಯೋಜನೆ ಹಾಗೂ ರಾಷ್ಟ್ರೀಯ ಮಹತ್ವದ ಪ್ರಮುಖ ವಿಷಯದ ಚರ್ಚೆ ಎಬಿಪಿಎಸ್‌ನಲ್ಲಿ ನಡೆಯಲಿದೆ. 

ಹೊಸ ಸರಕಾರ್ಯವಾಹ ಆಯ್ಕೆಯ ಚುನಾವಣೆ ಶನಿವಾರ ನಡೆಯಲಿದೆ. ಕೋವಿಡ್ ಕಾರಣ ಎಲ್ಲ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡಿದ್ದು, ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ವರ್ಚುವಲ್ ವ್ಯವಸ್ಥೆ ಮೂಲಕ ಭಾಗವಹಿಸಲು ಅನುಕೂಲ ಆಗುವಂತೆ ದೇಶದ 44 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು