ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಸೀಟುಗಳಿಗೆ ಆಯ್ಕೆ ; ಆಗಸ್ಟ್ 10ರೊಳಗೆ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶ

Last Updated 29 ಜುಲೈ 2020, 20:16 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಬರುವ ಎಲ್‌ಕೆಜಿಯ 1,811, ಒಂದನೇ ತರಗತಿಯ 14,887 ಮತ್ತು ಒಂದನೇ ತರಗತಿಗೆ ಹೆಚ್ಚುವರಿಯಾಗಿ 755 ಸೇರಿ ಒಟ್ಟು 17,453 ಸೀಟುಗಳಿಗೆ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆ ಬುಧವಾರ ನಡೆಯಿತು.

ಆಯ್ಕೆಯಾದ ವಿದ್ಯಾರ್ಥಿಗಳು ಗುರುವಾರದಿಂದ (ಜುಲೈ 30) ಆಗಸ್ಟ್‌ 10ರ ಒಳಗೆ ದಾಖಲಾತಿ ಮಾಡಿಕೊಳ್ಳಬೇಕು. ಪೋಷಕರ ಮೊಬೈಲ್‌ ಸಂಖ್ಯೆಗೆ ಈ ಕುರಿತು ಸಂದೇಶ ರವಾನೆ ಯಾಗಿದೆ. ‘1,514 ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಬರುವ 11,279 ಸೀಟುಗಳಿಗೆ ಯಾವುದೇ ಅರ್ಜಿ ಸಲ್ಲಿಕೆ ಆಗಿಲ್ಲ’ ಎಂದು ಸರ್ವ ಶಿಕ್ಷಣ ಅಭಿಯಾನದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಆರ್‌ಟಿಇ ಅಡಿ 1.53 ಲಕ್ಷ ಸೀಟುಗಳು ಇದ್ದವು. ಎಲ್ಲೆಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿವೆಯೊ ಅಂಥ ಕಡೆ ಆರ್‌ಟಿಇ ಕೆಳಗಡೆ ಅನುದಾನರಹಿತ ಶಾಲೆಗಳನ್ನು ಗುರುತಿಸಬಾರದು ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಆ ಬಳಿಕ ಆರ್‌ಟಿಇ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ.

ಒಟ್ಟು 2,480 ಶಾಲೆಗಳು ಆರ್‌ಟಿಇಗೆ ಅರ್ಹತೆ ಪಡೆದಿವೆ. ಅನುದಾನಿತ ಶಾಲೆಗಳಲ್ಲಿ 14,908, ಅನುದಾನರಹಿತ ಶಾಲೆ ಗಳಲ್ಲಿ 2,545 ಸೇರಿ ಒಟ್ಟು 17,453 ಸೀಟು ಈ ವರ್ಷ ಲಭ್ಯ ವಿದೆ. ಆದರೆ, ದಾಖಲಾತಿ ಕೋರಿ ಬಂದ ಅರ್ಜಿಗಳ ಸಂಖ್ಯೆ ಕೇವಲ 11,466.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT