ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಬಂಧನ ಭೀತಿ

Last Updated 26 ಮೇ 2018, 14:45 IST
ಅಕ್ಷರ ಗಾತ್ರ

ಬೆಂಗಳೂರು: ಅರ್‌ಅರ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ರಾಕೇಶ್ ಎಂಬುವವರು ನೀಡಿದ ದೂರಿನಂತೆ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಮತ್ತೆ  ಪೊಲೀಸಲಿಗೆ 7ನೇ ಎಂಸಿಎಂಎಂ ನ್ಯಾಯಾಲಯ ಸೂಚಿಸಿದೆ.

ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿರುವುದರಿಂದ ಮಾಜಿ ಶಾಸಕ ಮುನಿರತ್ನ ಅವರಿಗೆ ಬಂಧನ ಭೀತಿ ಎದುರಾಗಿದೆ.

ಪ್ರಕರಣದ ಕುರಿತು ದೂರು ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿರುವ ಎಸಿಎಂಎಂ ನ್ಯಾಯಾಲಯ, ಕ್ರೈಮ್ ನಂಬರ್ 54ರಡಿ ಐಪಿಸಿ ಸೆಕ್ಷನ್‌ಗಳ ಸೇರ್ಪಡೆಗೆ ನಿರ್ದೇಶನ ನೀಡಿದೆ. ಐಪಿಸಿ ಸೆಕ್ಷನ್ 420, 465, 468, 471, 171F, 171F ಸೇರ್ಪಡೆಗೆ ನಿರ್ದೇಶನ ನೀಡಿದೆ.

ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಮೇ 8ರಂದು 9,564 ಗುರುತಿನ ಚೀಟಿಗಳ ಬಂಡಲ್‌ಗಳು ಸಿಕ್ಕಿದ್ದವು. ಈ ಸಂಬಂಧ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಸೇರಿ 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT