ಬೆಂಗಳೂರು: ‘ಸಮಸ್ಯೆಗಳಿಗೆ ಸ್ಪಂದಿಸಲು ಆರಂಭಿಸಿರುವ ‘ಸಹಾಯ ಆ್ಯಪ್’ ಮತ್ತು ಸಹಾಯವಾಣಿ 1533 ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೂರುಗಳಿಗೆ ಪರಿಹಾರ ಸಿಗದೆ ಹೋದರೂ ‘ಬಗೆಹರಿಸಲಾಗಿದೆ’ ಎಂದು ತೋರಿಸಲಾಗುತ್ತಿದೆ’ ಎಂದು ನಾಗರಿಕರು ದೂರಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ, ‘ಮೂಲಸೌಕರ್ಯಗಳ ಕುರಿತು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಮಾಸಿಕ ಸಭೆ’ಯಲ್ಲಿ ಸಾರ್ವಜನಿಕರು ಸಮಸ್ಯೆ ಪರಿಹಾರವಾಗದ ಬಗ್ಗೆ ಅಳಲು ತೋಡಿಕೊಂಡರು.

‘ಎಚ್ಎಸ್ಆರ್ ಲೇಔಟ್ನಲ್ಲಿ ಕಟ್ಟಡ ನಿಯಮಗಳ ಉಲ್ಲಂಘನೆ, ರಾಜಕಾಲುವೆ ಹೂಳೆತ್ತುವ ಕಾರ್ಯ ವಿಳಂಬ ಮತ್ತು ಪೌರಕಾರ್ಮಿಕರ ಕೊರತೆ ಇದೆ. ಪಾದಚಾರಿ ಮಾರ್ಗಗಳ ಅತಿಕ್ರಮಣದಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ’ ಎಂದು ದೂರಿದರು.

‘ರಸ್ತೆ ಮಾರ್ಕಿಂಗ್ ಹಾಗೂ ಯಂತ್ರಗಳಿಂದ ಗುಡಿಸುವ ವ್ಯವಸ್ಥೆಯನ್ನು ಎಲ್ಲಾ ವಾರ್ಡ್ಗಳಿಗೆ ವಿಸ್ತರಿಸಬೇಕು. ಪಾಲಿಕೆ ವ್ಯಾಪ್ತಿಯ ಬಹುತೇಕ ಕಡೆ ಕಸ ಸಂಗ್ರಹಣೆಗೆ ಆಟೊ ಬರುವುದಿಲ್ಲ. ಇದರಿಂದ ಬ್ಲಾಕ್ ಸ್ಪಾಟ್ ಹೆಚ್ಚಲು ಕಾರಣವಾಗಿದೆ’ ಎಂದು ಹೇಳಿದರು.

‘ಮೂಲದಲ್ಲೇ ಕಸ ವಿಂಗಡಣೆ ಮಾಡುವುದು ಕಡ್ಡಾಯವಾಗಿದ್ದು, ಕೋರಮಂಗಲದ 'ಸಾಹಸ್' ಎನ್ಜಿಒ ಮಾದರಿಯಲ್ಲಿ ಪ್ರತಿ ವಾರ್ಡ್ನಲ್ಲಿ ಸ್ವಯಂಸೇವಕರು ಘನತ್ಯಾಜ್ಯ ನಿರ್ವಹಣೆ ತಂಡದೊಂದಿಗೆ ಸಹಕರಿಸಬೇಕು’ ಎಂದು ಕೆ.ಎನ್. ರಮೇಶ್ ತಿಳಿಸಿದರು.

‘ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತಿ ಪ್ರದೇಶದಲ್ಲಿ 'ರೂಟ್ ಮಟ್ಟದ ತಂಡ'ಗಳನ್ನು ರಚಿಸಿಕೊಳ್ಳಬೇಕು. ಸ್ಥಳೀಯ ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯನ್ನು ಬಳಸಿಕೊಳ್ಳಲು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಪಾಲಿಕೆಯೊಂದಿಗೆ ಕೈಜೋಡಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನದ ವೇಗವನ್ನು ಹೆಚ್ಚಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಪಾಲಿಕೆ ಬದ್ಧವಾಗಿದೆ’ ಎಂದು ಆಯುಕ್ತರು ಭರವಸೆ ನೀಡಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಸ್ಥಳೀಯ ನಿವಾಸಿಗಳ ಸಂಘಗಳು ಒಗ್ಗೂಡಿ ‘ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ನಿವಾಸಿಗಳ ಸಂಘಗಳ ಒಕ್ಕೂಟ’ ಸ್ಥಾಪಿಸಿದ್ದಾರೆ. ಅದರ ಬ್ಯಾನರ್ ಅನ್ನು ರಮೇಶ್ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.