ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಯಿ ರೆಸಿಡೆನ್ಸಿಯ ಬಾಲ್ಕನಿಯಲ್ಲಿ ಆತ್ಮಹತ್ಯೆ ಪ್ರಕರಣ: ಮಹಿಳೆ ಗುರುತು ಪತ್ತೆ

Published 9 ಆಗಸ್ಟ್ 2024, 16:23 IST
Last Updated 9 ಆಗಸ್ಟ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಸಾಯಿ ರೆಸಿಡೆನ್ಸಿಯ ಬಾಲ್ಕನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಗುರುತು ಪತ್ತೆಯಾಗಿದೆ.

ಚನ್ನಪಟ್ಟಣದ ಜಯಶ್ರೀ (46) ಆತ್ಮಹತ್ಯೆ ಮಾಡಿಕೊಂಡವರು.

ಮಹಿಳೆ ಧರಿಸಿದ್ದ ವಸ್ತ್ರದ ಜೇಬಿನಲ್ಲಿ ಬಸ್​ ಮತ್ತು ಸಿನಿಮಾ ಟಿಕೆಟ್ ಮಾತ್ರ ಪತ್ತೆ ಆಗಿದ್ದವು. ಅವರ ಗುರುತಿನ ಚೀಟಿ ಸಿಕ್ಕಿರಲಿಲ್ಲ. ಭಾನುವಾರ ನವರಂಗ್ ಥಿಯೇಟರ್​ನಲ್ಲಿ ಅವರು ಸಿನಿಮಾ ವೀಕ್ಷಿಸಿ ಬಿಎಂಟಿಸಿ ಬಸ್‌ನಲ್ಲಿ ಮೆಜೆಸ್ಟಿಕ್​​ನಿಂದ ಮಲ್ಲೇಶ್ವರಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 

‘ವೈಯಾಲಿಕವಲ್‌ ನಿವಾಸಿಯಾದ ಜಯಶ್ರೀ ಅವರು ಚನ್ನಪಟ್ಟಣದ ವ್ಯಕ್ತಿಯೊಬ್ಬರನ್ನು ಮದುವೆ ಆಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಕುಟುಂಬಸ್ಥರ ಜತೆಗೆ ಮನಸ್ತಾಪ ಉಂಟಾಗಿತ್ತು. ಅದೇ ಬೇಸರದಲ್ಲಿ ಮನೆಬಿಟ್ಟು ಬಂದಿದ್ದರು. ಚಿನ್ನಾಭರಣ ಅಡವಿಟ್ಟು ನಗರಕ್ಕೆ ಬಂದಿದ್ದ ಅವರು ಮೆಜೆಸ್ಟಿಕ್‌ನಲ್ಲೇ ರಾತ್ರಿ ನಿದ್ರಿಸಿದ್ದರು. ಅಲ್ಲದೇ ಸಿನಿಮಾ ವೀಕ್ಷಣೆ ಮಾಡಿದ್ದರು. ಮಂಗಳವಾರ ಬೆಳಿಗ್ಗೆ ಮಲ್ಲೇಶ್ವರಕ್ಕೆ ಬಂದಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿದ್ದರು. ನಂತರ, ಕಟ್ಟಡದೊಳಕ್ಕೆ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT