ಬುಧವಾರ, ಜೂನ್ 29, 2022
24 °C

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮರಸ್ಯ ವೇದಿಕೆಯ ರಾಜ್ಯ ಘಟಕವು ‘ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು’ 
(Various efforts to achieve Social Harmony) ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ 18 ರಿಂದ 30 ವರ್ಷದ ಒಳಗಿನ ಯುವಕ-ಯುವತಿಯರು ಪಾಲ್ಗೊಳ್ಳಬಹುದು. ಪ್ರಥಮ ₹10 ಸಾವಿರ, ದ್ವಿತೀಯ ₹7,500, ತೃತೀಯ ₹5,000 ಹಾಗೂ ಹತ್ತು ಜನರಿಗೆ ತಲಾ ₹1 ಸಾವಿರ ನಗದು ಬಹುಮಾನ ನಿಗದಿ ಪಡಿಸಲಾಗಿದೆ.

ಪದಗಳು ಮಿತಿ 1,500. ಪ್ರಬಂಧಗಳನ್ನು essaysamarasyavedike@gmail.com ಗೆ ಜುಲೈ 25ರೊಳಗೆ ಪ್ರಬಂಧಗಳನ್ನು ಕಳುಹಿಸಬೇಕು ಎಂದು ವೇದಿಕೆಯ ಪ್ರಾಂತ ಸಂಯೋಜಕ ಲಕ್ಷ್ಮೀನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಹಿತಿಗೆ 98809 23907, 72590 11545.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು