ಶ್ರೀಮಂತರಿಗೆ ಮಾನವೀಯ ದೃಷ್ಟಿ ಅಗತ್ಯ

7
ಪಾಪನಹಳ್ಳಿಯಲ್ಲಿ ಸಂಧ್ಯಾಧಾರಾ ವೃದ್ಧಾಶ್ರಮ ಉದ್ಘಾಟನೆ

ಶ್ರೀಮಂತರಿಗೆ ಮಾನವೀಯ ದೃಷ್ಟಿ ಅಗತ್ಯ

Published:
Updated:
ಬಿ.ಕೆ.ಮರಿಯಪ್ಪ ಧರ್ಮಸಂಸ್ಥೆಯ ವತಿಯಿಂದ ಭಾನುವಾರ ಉದ್ಘಾಟನೆಗೊಂಡ ‘ಸಂಧ್ಯಾಧಾರಾ’ ವೃದ್ಧಾಶ್ರಮ

ಬೆಂಗಳೂರು: ಶ್ರೀಮಂತರು ಮಾನವೀಯ ದೃಷ್ಟಿಯಿಂದ ಗಮನಹರಿಸಿ, ಬಡಜನರನ್ನು ಮೇಲಕ್ಕೆ ತರಲು ಪ್ರಯತ್ನಿಸಬೇಕು ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಪಾಪನಹಳ್ಳಿಯಲ್ಲಿ ಬಿ.ಕೆ.ಮರಿಯಪ್ಪ ಧರ್ಮಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಿರುವ ‘ಸಂಧ್ಯಾ ಧಾರಾ’ ವೃದ್ಧಾಶ್ರಮ ಕಟ್ಟಡ ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.

ಚೆನ್ನಾಗಿ ಸಂಪಾದನೆ ಮಾಡುವ ಕೆಲವು ಮಕ್ಕಳು ತಂದೆ-ತಾಯಿಗಳನ್ನು ನಿರ್ಲಕ್ಷಿಸುತ್ತಾರೆ. ಅಂತವರಿಗೆ ಇಲ್ಲಿ ಆಶ್ರಯ ನೀಡಿದರೆ ಪ್ರಯೋಜನವಿಲ್ಲ. ಮಕ್ಕಳಿಂದ ಸಹಾಯ ಪಡೆಯಲು ಸಾಧ್ಯವೇ ಇಲ್ಲದವರನ್ನು ಗುರುತಿಸಿ, ಅಂತವರಿಗೆ ನೆರವು ನೀಡಬೇಕು ಎಂದು ಸಲಹೆ ನೀಡಿದರು.

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸಮಾಜಕ್ಕೆ ಬೇಕಾಗಿರುವ ಅವಶ್ಯಕತೆಗಳನ್ನು ಪೂರೈಸುವ ಉತ್ತಮ ಕಾರ್ಯವನ್ನು ಬಿ.ಕೆ.ಮರಿಯಪ್ಪ ಧರ್ಮಸಂಸ್ಥೆಯು ಮಾಡಿರುವುದು ಪ್ರಶಂಸನೀಯ. ಸಮಾಜದಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಕಡೆಗಣಿಸದೆ, ಸರಿಯಾದ ರೀತಿಯಲ್ಲಿ ಪೋಷಿಸಿದರೆ ಆರೋಗ್ಯವಂತ ಸಮಾಜವನ್ನು ಕಾಣಲು ಸಾಧ್ಯ ಎಂದರು.

ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಎನ್.ಪುಟ್ಟರುದ್ರ ಮಾತನಾಡಿ, ದಾನಿಗಳ ದೇಣಿಗೆಯಿಂದ ₹ 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಈಗ 40 ಜನರಿಗೆ ಆಶ್ರಯ ನೀಡಲು ಯೋಜಿಸಲಾಗಿದೆ. ಊಟ, ವಸತಿಯ ಜತೆಗೆ ಅಧ್ಯಯನಕ್ಕಾಗಿ ಗ್ರಂಥಾಲಯ ಹಾಗೂ ಮನರಂಜನೆಗಾಗಿ ಟಿವಿ ವ್ಯವಸ್ಥೆ ಕಲ್ಪಿಸಲಾಗುವುದು. ಯೋಗಕ್ಷೇಮ ನೋಡಿಕೊಳ್ಳಲು ವೈದ್ಯರೊಬ್ಬರನ್ನು ನೇಮಿಸಲಾಗುವುದು ಎಂದರು.

ಮೈಂಡ್ ಟ್ರೀ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷ ಕೃಷ್ಣಕುಮಾರ್ ನಟರಾಜನ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !