ಮಂಗಳವಾರ, ನವೆಂಬರ್ 19, 2019
23 °C

ಗಾಂಧೀಜಿ ಬಗ್ಗೆ ಉಡಾಫೆ ಮಾತು: ಸಂತೋಷ ಹೆಗ್ಡೆ ಕಿಡಿ

Published:
Updated:
Prajavani

ನೆಲಮಂಗಲ: ಗಾಂಧೀಜಿ ಕೂಡ ಜೈಲಿಗೆ ಹೋಗಿ ಬಂದಿದ್ದರು ಎಂಬ ಉಡಾಫೆ ಮಾತುಗಳನ್ನು ಇಂದಿನ ರಾಜಕಾರಣಿಗಳು ಹೇಳುತ್ತಿದ್ದಾರೆ. ಜೈಲಿನಿಂದ ಬರುವವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಅನಿಷ್ಠ ಪದ್ಧತಿಯಿಂದ ಪ್ರಜಾಪ್ರಭುತ್ವ ಕುಸಿಯುತ್ತಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

ದಾಸನಪುರದ ಹಾರ್ವರ್ಡ್‌ ಶಾಲೆಯಲ್ಲಿ ರಾಜ್ಯೋತ್ಸವ ಮತ್ತು ಗಾಂಧೀಜಿ 150ನೇ ಜನ್ಮದಿನ ಉದ್ಘಾಟಿಸಿ ಮಾತನಾಡಿದ ಅವರು, ‘ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸಂಸತ್‌ ಕಲಾಪಗಳು ಪ್ರತಿಷ್ಠೆ, ಗಲಾಟೆ, ಸಭಾತ್ಯಾಗಕ್ಕೆ ಮೀಸಲಾಗಿವೆ. ವ್ಯವಸ್ಥೆ ಬದಲಿಸುವುದು ಇಂದಿನ ಅಗತ್ಯ. ಸಾಮಾಜಿಕ ಮೌಲ್ಯ ಉಳ್ಳವರು ರಾಜಕೀಯಕ್ಕೆ ಬರಬೇಕಿದೆ ಎಂದರು.

ಪ್ರತಿಕ್ರಿಯಿಸಿ (+)