ಬೆಂಗಳೂರು: ಅಂಗವಿಕಲರು ಸ್ವತಂತ್ರವಾಗಿ ಜೀವನ ನಡೆಸಲು ಸಹಾಯಕವಾಗುವ ಎಲ್ಲ ಸಾಧನಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು, ಇಲ್ಲವೇ ಅದನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಅಂಗವಿಕಲರು ಬಳಸುವ ವಿವಿಧ ಸಾಧನಗಳು, ಸಲಕರಣೆಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತಿದೆ. ಇವು ಐಷಾರಾಮಿ ವಸ್ತುಗಳಲ್ಲ, ಅವಶ್ಯಕವಾಗಿ ಬೇಕಾದ ಸಲಕರಣೆಗಳು. ಹೀಗಾಗಿ ಅವುಗಳನ್ನು ಶೂನ್ಯ ತೆರಿಗೆ ಅಥವಾ ವಿನಾಯಿತಿ ಪಡೆದ ವರ್ಗದ ಅಡಿಯಲ್ಲಿ ಸೇರಿಸಬೇಕು. ಅಲ್ಲದೆ ಕೈಗೆಟುಕುವ ರೀತಿ ಇವು ತಯಾರಾಗಬೇಕು. ಇದರಿಂದ ಲಕ್ಷಾಂತರ ಅಂಗವಿಕಲರಿಗೆ ಪ್ರಯೋಜನವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಂಗವಿಕಲರ ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ ಮತ್ತು ದೈನಂದಿನ ಸಾಮಾಜಿಕ ಜೀವನದಲ್ಲಿ ಭಾಗವಹಿಸಲು ವಿನಾಯಿತಿಯು ಹೆಚ್ಚಿನ ಅನುವು ಮಾಡಿಕೊಡುತ್ತದೆ. ಅವರ ಸಲಕರಣೆಗಳ ಮೇಲೆ ಜಿಎಸ್ಟಿ ವಿಧಿಸಿದರೆ ಅಂಗವಿಕಲರು ಮತ್ತು ಅವರ ಕುಟುಂಬಗಳ ಮೇಲೆ ಅಧಿಕ ಆರ್ಥಿಕ ಹೊರೆ ಬೀಳುತ್ತದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.