ದೃಷ್ಟಿಹೀನರಿಗಾಗಿ ಸೆನ್ಸರ್‌ ಸ್ಮಾರ್ಟ್‌ ಸ್ಟಿಕ್‌ !

7
ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಸಾಧನೆ

ದೃಷ್ಟಿಹೀನರಿಗಾಗಿ ಸೆನ್ಸರ್‌ ಸ್ಮಾರ್ಟ್‌ ಸ್ಟಿಕ್‌ !

Published:
Updated:

ಬೆಂಗಳೂರು‌: ದುರ್ಗಮ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕೆ ಬಳಸಬಹುದಾದ ಜೇಡರ ಹುಳುವನ್ನು ಹೋಲುವ ರೋಬೊಟ್‌ ಮತ್ತು ದೃಷ್ಟಿಹೀನರಿಗೆ ಅಡೆ ತಡೆ ಇಲ್ಲದೆ ನಡೆಯಲು ಸಹಾಯಕವಾಗುವ ಸೆನ್ಸರ್‌ ಸ್ಟಿಕ್‌ವೊಂದನ್ನು ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. 

ಬೆಟ್ಟ, ಗುಡ್ಡ, ಸಮತಟ್ಟಾದ ಪ್ರದೇಶ ಮತ್ತು ಇಳಿಜಾರಿನಲ್ಲಿ ಸರಾಗವಾಗಿ ಚಲಿಸುತ್ತದೆ. ಅಲ್ಲಿ ತೊಂದರೆಗೆ ಸಿಲುಕಿದವರ ಮಾಹಿತಿಯನ್ನು ಕಳುಹಿಸುತ್ತದೆ. ಯುದ್ಧ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಈ ರೋಬೊಟ್‌ ಉಪಯುಕ್ತ ಸಾಧನ ಎಂದು ಕಾಲೇಜಿನ ಅಧ್ಯಾಪಕರಾದ ಪ್ರೊ.ರಮ್ಯಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ರೋಬೊಟ್‌ಗೆ ಆರು ಕಾಲುಗಳಿವೆ.17 ಕೆ.ಜಿ ತೂಕದ ವಸ್ತುವನ್ನು ಹೊತ್ತೊಯ್ಯುವ ಶಕ್ತಿ ಹೊಂದಿದೆ. ಸಂಚರಿಸುವ ಸಂದರ್ಭ ಯಾರಾದರೂ ಅಡ್ಡ ಬಂದರೆ ದಿಕ್ಕನ್ನು ಬದಲಿಸುತ್ತದೆ. ಹಾಗೆಯೇ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಇದನ್ನು ಬ್ಲಿಂಕ್ ಆ್ಯಪ್ ಮೂಲಕ ರೋಬೊಟ್‌ ಅನ್ನು ನಿರ್ವಹಣೆ ಮಾಡಲಾಗುತ್ತದೆ. 18 ಸರ್ವರ್‌ಗಳನ್ನು ಹೊಂದಿದ್ದು, ಬ್ಯಾಟರಿ ಮೂಲಕ ಯಂತ್ರ ಚಲಿಸುತ್ತದೆ. 30 ರಿಂದ 45 ನಿಮಿಷ ಬ್ಯಾಟರಿ ಅವಧಿ ಹೊಂದಿರುತ್ತದೆ. ಇದಕ್ಕೆ ₹ 24,000 ‌ವೆಚ್ಚವಾಗಿದೆ’ ಎಂದು  ವಿದ್ಯಾರ್ಥಿಗಳು ವಿವರಿಸಿದರು.

ಸ್ಮಾರ್ಟ್‌ ಸ್ಟಿಕ್‌: ದೃಷ್ಟಿ ಹೀನರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎದುರಾಗುವ ಪ್ರಾಣಿಗಳು, ವ್ಯಕ್ತಿಗಳು ಮತ್ತು ಇತರ ಅಡೆತಡೆಗಳ ಬಗ್ಗೆ ಸೆನ್ಸರ್‌ ಒಳಗೊಂಡ ಸ್ಮಾರ್ಟ್‌ ಸ್ಟಿಕ್‌ ಕಂಪನದ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತದೆ ಎಂದು ಡಾ.ರವಿ ವಿವರಿಸಿದರು.

ಸ್ಟಿಕ್‌ನ ವಿಶೇಷ
‘ಈಗ ಬಳಸುವ ಸ್ಟಿಕ್‌ಗಿಂತ ಸ್ವಲ್ಪ ದೊಡ್ಡದು. ಇದರಲ್ಲಿ ಎರಡು  ಶೆಲ್‌ಗಳನ್ನು(ಮಂಡಿಯಿಂದ ಕೆಳಗೆ ಹಾಗೂ ಮೇಲೆ) ಅಳವಡಿಸಲಾಗಿರುತ್ತದೆ. ಶೆಲ್‌ಗಳನ್ನು ಒಂದು ಬಾರಿ ಚಾರ್ಚ್ ಮಾಡಿದರೆ 24 ಗಂಟೆ ಕಾರ್ಯನಿರ್ವಹಿಸಲಿದೆ. ಇದಕ್ಕೆ ರಿಮೋಟ್ ಕೂಡ ಸಿದ್ಧಪಡಿಸಲಾಗಿದೆ. ಮನೆಯಲ್ಲಿ ಸ್ಟಿಕ್ ಕಳುವಾದರೆ ರಿಮೋಟ್ ಒತ್ತಿದರೆ ಶಬ್ದ ಮಾಡುವ ಮೂಲಕ ಸೂಚನೆ ನೀಡುತ್ತದೆ’ ಎಂದು ಡಾ.ರವಿ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !