ಸೋಮವಾರ, ಮಾರ್ಚ್ 1, 2021
17 °C
ಸಪ್ತಗಿರಿ ಆಸ್ಪತ್ರೆ ಸಿಬ್ಬಂದಿಯಿಂದ 72 ಅಡಿ ಉದ್ದದ ತ್ರಿವರ್ಣಧ್ವಜ ನಿರ್ಮಾಣ

ರಾಷ್ಟ್ರಧ್ವಜದಲ್ಲಿ ಕೊರೊನಾ ಲಸಿಕೆ, ಇಂಜೆಕ್ಷನ್ ಮಾದರಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯ ದಾಸರಹಳ್ಳಿ: ಕೋವಿಡ್‌ ಲಸಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ರಾಷ್ಟ್ರಧ್ವಜದಲ್ಲಿ 7 ಅಡಿಯ ಕೊರೊನಾ ಲಸಿಕೆಯ ಬಾಟಲಿ ಮತ್ತು ಇಂಜೆಕ್ಷನ್ ಮಾದರಿಯನ್ನು ರೂಪಿಸುವ ಮೂಲಕ ವಿಭಿನ್ನವಾಗಿ ಗಣರಾಜ್ಯೋತ್ಸವ ಆಚರಿಸಿತು.

72 ಉದ್ದದ ತ್ರಿವರ್ಣ ಧ್ವಜವನ್ನು ರೂಪಿಸಿ, ಜಾಗೃತಿ ಆಂದೋಲನ ನಡೆಸಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ದೇಶೀಯ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಶ್ಲಾಘಿಸಿದೆ. ಆದರೆ, ಲಸಿಕೆ ಕುರಿತು ನಮ್ಮಲ್ಲಿ ಅಪಪ್ರಚಾರ ನಡೆಯುತ್ತಿದೆ. ಆ ತಪ್ಪು ಕಲ್ಪನೆ ನಿವಾರಣೆಯಾಗಬೇಕು ಎಂದು ಈ ರೀತಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ಮುಖ್ಯ ಪ್ರಾಚಾರ್ಯರಾದ ಡಾ. ಜಯಂತಿ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು