ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ 22ಕ್ಕೆ 36 ಉಪಗ್ರಹಗಳ ಉಡಾವಣೆ

Last Updated 6 ಅಕ್ಟೋಬರ್ 2022, 21:14 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಅತ್ಯಧಿಕ ತೂಕದ ರಾಕೆಟ್‌ ‘ಜಿಎಸ್‌ಎಲ್‌ವಿ–ಎಂಕೆ 3’ ಇದೇ 22 ರಂದು ಜಾಗತಿಕ ವಾಣಿಜ್ಯ ಉದ್ದೇಶದ ಉಪಗ್ರಹಗಳ ಉಡಾವಣಾ ಸೇವೆಗೆ ಕಾಲಿಡಲಿದೆ.

ಅಂದು ಶ್ರೀಹರಿಕೋಟಾದಿಂದ ಬ್ರಿಟನ್‌ನ ನವೋದ್ಯಮ ಒನ್‌ವೆಬ್‌ನ 36 ಬ್ರಾಡ್‌ಬ್ಯಾಂಡ್‌ ಉಪಗ್ರಹಗಳನ್ನು ನಭಕ್ಕೆ ಹೊತ್ತು ಸಾಗಲಿದೆ. ಇದು ಜಿಎಸ್‌ಎಲ್‌ವಿ–ಎಂಕೆ 3 ರಾಕೆಟ್‌ನ ಪ್ರಪ್ರಥಮ ವಾಣಿಜ್ಯ ಉದ್ದೇಶದ ಉಡಾವಣೆಯಾಗಿದೆ. ಈಸಂಬಂಧ ಒನ್‌ವೆಬ್‌ ಜತೆಗೆ ಇಸ್ರೊದ ವಾಣಿಜ್ಯ ಉಡ್ಡಯನದ ವಿಭಾಗ ‘ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌’ (ಎನ್‌ಎಸ್‌ಐಎಲ್‌) ಜತೆ ಒಪ್ಪಂದ ನಡೆದಿತ್ತು.

ಈ ಹೊಸ ರಾಕೆಟ್‌ ನಾಲ್ಕು ಟನ್‌ ತೂಕದ ಉಪಗ್ರಹಗಳನ್ನು ಹೊತ್ತು ಭೂ ವರ್ಗಾವಣೆ ಕಕ್ಷೆಗೆ ಸೇರಿಸಲಿದೆ. ಅಕ್ಟೋಬರ್‌ 21 ರ ಮಧ್ಯರಾತ್ರಿ ಕಳೆದ ನಡೆದ ನಂತರ ಅಂದರೆ ಅಕ್ಟೋಬರ್‌ 22 ರ ನಸುಕಿನ 00:12 ಗಂಟೆಗೆ ಉಡಾವಣೆ ಮಾಡಲಾಗುವುದು ಎಂದು ಎನ್‌ಎಸ್‌ಐಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒನ್‌ವೆಬ್‌ನ 36 ಉಪಗ್ರಹಗಳನ್ನು ಜಿಎಸ್‌ಎಲ್‌ವಿ–ಎಂಕೆ 3 ರ ಮೂಲಕ ಕಕ್ಷೆಗೆ ಉಡಾವಣೆ ಮಾಡುತ್ತಿರುವುದು ಎನ್‌ಎಸ್‌ಐಎಲ್‌ ಮತ್ತು ಇಸ್ರೊಗೆ ಐತಿಹಾಸಿಕ
ಕ್ಷಣವಾಗಿದೆ ಎಂದು ಎನ್‌ಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT