ಶನಿವಾರ, ಏಪ್ರಿಲ್ 4, 2020
19 °C
ಕರ್ಫ್ಯೂ ವೇಳೆ ಸರ್ಕಾರದ ಕಿವಿ ಹಿಂಡಿದರು

ಬನ್ನೇರುಘಟ್ಟ ಉದ್ಯಾನ ಉಳಿಸಿ: ಟ್ವಿಟ್ಟರ್‌ನಲ್ಲಿ ಮೊಳಗಿದ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂ‌ಗಳೂರು: ಜನತಾ ಕರ್ಫ್ಯೂ ವೇಳೆ ಹೆಚ್ಚಿನವರು ಮನೆಯಲ್ಲಿ ಕಾಲ ಕಳೆಯಲು ಚಡಪಡಿಸುತ್ತಿದ್ದರೆ, ಪರಿಸರ ಪ್ರೇಮಿಗಳು ಈ ಸಮಯವನ್ನು ಸದುದ್ದೇಶಕ್ಕೆ ಬಳಸಿಕೊಂಡರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್‌ಜೆಡ್‌) 100 ಚದರ ಕಿ.ಮೀ.ಗಳಷ್ಟು ಕಡಿತ ಮಾಡಿರುವ ನಿರ್ಧಾರ ಹಿಂಪಡೆಯಿರಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ತಮ್ಮ ಪ್ರತಿಭಟನೆ ದಾಖಲಿಸಲು ಹಾಗೂ ಹಕ್ಕೊತ್ತಾಯ ಮಂಡಿಸಲು ಅವರು ಬಳಸಿಕೊಂಡಿದ್ದು ಟ್ವಿಟರ್‌ ಸಾಮಾಜಿಕ ಜಾಲತಾಣವನ್ನು. ವೃಕ್ಷಾ ಪ್ರತಿಷ್ಠಾನ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನದ ಆಶ್ರಯದಲ್ಲಿ ಪರಿಸರ ಕಾರ್ಯಕರ್ತರು ಹಮ್ಮಿಕೊಂಡಿದ್ದ ಈ ಟ್ವೀಟ್‌ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರಲ್ಲಿ 3 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿದವು.

‘ಇಎಸ್‌ಜೆಡ್‌ ಪ್ರಮಾಣವನ್ನು 100 ಚ.ಕಿ.ಮೀಗಳಷ್ಟು ಕಡಿಮೆ ಮಾಡುವುದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅವನತಿಗೆ ಕಾರಣವಾಗಲಿದೆ. ಪರಿಸರ ಉಳಿಸಿಕೊಳ್ಳದಿದ್ದರೆ ಕೊರೊನಾಕ್ಕಿಂತಲೂ ಭೀಕರ ವೈರಸ್‌ಗಳು ಹುಟ್ಟಿಕೊಳ್ಳಬಲ್ಲವು. ಬೆಂಗಳೂರಿನ ಪಾಲಿನ ಶ್ವಾಸಕೋಶದಂತಿರುವ ಈ ರಾಷ್ಟ್ರೀಯ ಉದ್ಯಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯಬಾರದು’ ಎಂದು ಪರಿಸರ ಕಾರ್ಯಕರ್ತರು ಒತ್ತಾಯಿ ಸಿದರು.

‘ಈ ಅಭಿಯಾನಕ್ಕೆ ಜನ ಬೆಂಬಲ ಸಿಕ್ಕಿದೆ. ಸರ್ಕಾರ ತನ್ನ ನಿರ್ಧಾರವನ್ನು ಇನ್ನಾದರೂ ಮರುಪರಿಶೀಲಿಸಬೇಕು’ ಎಂದು ವೃಕ್ಷಾ ಪ್ರತಿಷ್ಠಾನದ ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇಎಸ್‌ಜೆಡ್‌ ಕಡಿತ ಮಾಡಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಇತ್ತೀಚೆಗೆ ಆದೇಶ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು