ಬೆಂಗಳೂರು: ‘ಚನ್ನಪಟ್ಟಣ ತಾಲೂಕಿನ 5 ಸರ್ಕಾರಿ ಶಾಲೆ ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಲು ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿ, ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಿರುವುದು ಸಂವಿಧಾನ ವಿರೋಧಿ ಕ್ರಮ’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ರಾಜ್ಯ ಸಮಿತಿಯು(ಎಐಎಸ್ಇಸಿ) ಸರ್ಕಾರಕ್ಕೆ ‘ಜನತೆಯ ಶೋಕಾಸ್ ನೋಟಿಸ್’ ನೀಡಿದೆ.

ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಈ ನೋಟಿಸ್ ನೀಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ತಿಳಿಸಿದ್ದಾರೆ.

‘ಹೊಡಿಕೆ ಹೊಸಹಳ್ಳಿ, ಕನ್ನದೊಡ್ಡಿ, ಅಮ್ಮಳ್ಳಿದೊಡ್ಡಿ, ಸಂತೆಮೊಗೇನಹಳ್ಳಿ, ಸುಣ್ಣಘಟ್ಟ ಶಾಲೆ ಮುಚ್ಚುವ ಭಾಗವಾಗಿ ಶಿಕ್ಷಕರನ್ನು ದಂಡಿಸಲು ಮುಂದಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶದಿಂದ ಆಘಾತ ಉಂಟು ಮಾಡಿದೆ. ಸಂವಿಧಾನ, ಆರ್ಟಿಇ ಕಾಯ್ದೆ ಎತ್ತಿ ಹಿಡಿದ ಮುಖ್ಯೋಪಾಧ್ಯಾಯರನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿರುವುದು ಆಡಳಿತವಲ್ಲ; ಇದು 'ಶೈಕ್ಷಣಿಕ ನಿರಂಕುಶ ಪ್ರಭುತ್ವ’ ಎಂದು ಟೀಕಿಸಿದ್ದಾರೆ.

‘ಶಿಕ್ಷಣ ಸಚಿವರು ಬೆಳಗಾವಿ ಅಧಿವೇಶನದಲ್ಲಿ, ಯಾವುದೇ ಕನ್ನಡ ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಒಬ್ಬ ಮಗುವಿದ್ದರೂ ಶಾಲೆ ಕಾರ್ಯನಿರ್ವಹಿಸಲಿದೆ ಎಂದು ಘೋಷಿಸಿದ್ದರು. ಅಧಿವೇಶನದಲ್ಲಿ ಒಂದು ಮಾತನಾಡಿ, ಅಧಿಕಾರಿಗಳ ಮೂಲಕ ವಿಧ್ವಂಸಕ ಅಜೆಂಡಾವನ್ನು ಜಾರಿಗೊಳಿಸಲಾಗುತ್ತಿದೆ ’ ಎಂದು ಆರೋಪಿಸಿದ್ದಾರೆ.

‘ಸರ್ಕಾರ ಕೂಡಲೇ ಶೋಕಾಸ್ ನೋಟಿಸ್ ಹಿಂದಕ್ಕೆ ಪಡೆದು, ವರ್ಗಾವಣೆ ಪತ್ರ ರದ್ದುಪಡಿಸಬೇಕು. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಮ್ಯಾಗ್ನೇಟ್ ಶಾಲೆ ಆರಂಭಕ್ಕೆ ಎಡಿಬಿಯಿಂದ ಸಾಲ ಪಡೆಯುವುದಿಲ್ಲ ಎಂದು ಘೋಷಿಸಬೇಕು. 62 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.