ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ಸಿಂಗ್, ರಾಜಗುರು ಮತ್ತು ಸುಖದೇವ್ ಅವರ 95ನೇ ಹುತಾತ್ಮ ದಿನವನ್ನು ಎಐಡಿಎಸ್ಒ ಜಿಲ್ಲಾ ಸಮಿತಿಯಿಂದ ನಗರದ ಶಾಲಾ ಕಾಲೇಜುಗಳಲ್ಲಿ ಆಚರಿಸಲಾಯಿತು.

‘ಬಡವರ ಮನೆ ಬೆಳಗಲು ಶಾಲೆ ಉಳಿಸಿ; ಭಗತ್ ಸಿಂಗ್ ಕನಸು ಕಂಡ ಭಾರತವ ಕಟ್ಟಿ’ ಎಂಬ ಘೋಷವಾಕ್ಯದೊಂದಿಗೆ ನಡೆದ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಅಭಿಯಾನದ ಭಾಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ವಿ. ಕಲ್ಯಾಣ್ ಕುಮಾರ್ ಮಾತನಾಡಿ, ‘ಭಗತ್ ಸಿಂಗ್ ಕೇವಲ ಆಳುವವರ ಬದಲಾವಣೆಗಾಗಿ ಪ್ರಾಣತ್ಯಾಗ ಮಾಡದೇ ಶೋಷಣೆ ಮುಕ್ತವಾದ ಸಮಾಜವಾದಿ ಭಾರತದ ನಿರ್ಮಾಣಕ್ಕಾಗಿ ಹೋರಾಡಿದರು. ಇಂದು ಶಿಕ್ಷಣವು ಹಕ್ಕಾಗಿ ಉಳಿಯದೆ ಮಾರಾಟದ ವಸ್ತು ಆಗುತ್ತಿರುವಾಗ ಅವರ ಮಾತುಗಳು ಈಗ ಹೆಚ್ಚು ಅನ್ವಯವಾಗುತ್ತಿವೆ’ ಎಂದರು.

‘ಸರ್ಕಾರದ ಕೆಪಿಎಸ್-ಮ್ಯಾಗ್ನೆಟ್ ನೀತಿ ಹುತಾತ್ಮರ ಕನಸಿನ ಮೇಲಿನ ನೇರ ದಾಳಿಯಾಗಿದೆ. ಸಂಪನ್ಮೂಲಗಳನ್ನು ಕೆಲವೇ ಶಾಲೆಗೆ ಸೀಮಿತಗೊಳಿಸಿ, ಸಾವಿರಾರು ಸರ್ಕಾರಿ ಶಾಲೆ ಮುಚ್ಚಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕೊಲ್ಲಲು ಹೊರಟಿದೆ. ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಸಂಘಟಿತರಾಗಿ ಹೋರಾಡಬೇಕಿದೆ’ ಎಂದರು.

ಜಿಲ್ಲಾ ಸದಸ್ಯರಾದ ನವಾಜ್, ಹಂಸ ಮತ್ತು ತುಳಸಿ, ರಾಜಶೇಖರ್, ಸಂಜಯ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.