ಬೆಂಗಳೂರು: ‘ಕೋರಮಂಗಲದ ಕೇಂದ್ರೀಯ ಸದನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಂಘದ ಕಚೇರಿ ತೆರವು ವಿಚಾರವಾಗಿ ಮಧ್ಯ ಪ್ರವೇಶಿಸಿ, ಅಲ್ಲಿಯೇ ಸ್ಥಳವನ್ನು ದೊರಕಿಸಿಕೊಡಬೇಕು’ ಎಂದು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗದ ನೇತೃತ್ವದಲ್ಲಿ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಸಾಹಿತಿ ದೊಡ್ಡರಂಗೇಗೌಡ, ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಕಲಾವಿದ ‘ಮುಖ್ಯಮಂತ್ರಿ’ ಚಂದ್ರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್, ಜಾನಪದ ಲೋಕದ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ, ಸಂಶೋಧಕ ಆರ್. ಶೇಷಶಾಸ್ತ್ರಿ, ಕನ್ನಡ ಪರ ಹೋರಾಟಗಾರರಾದ ರಾ.ನಂ. ಚಂದ್ರಶೇಖರ ಮತ್ತು ವ.ಚ. ಚನ್ನೆಗೌಡ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

‘ಕೇಂದ್ರೀಯ ಸದನದಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಗಳ 36 ಕಚೇರಿಗಳಿವೆ. ಅಲ್ಲಿ ಹಲವು ಭಾಷೆಗಳ, ರಾಜ್ಯಗಳ ಜನರು ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರು ಅಲ್ಲಿ ಅಲ್ಪಸಂಖ್ಯಾತರಾಗಿದ್ದು, ಈ ಸಂಘ ಸ್ಥಾಪನೆಯ ಮೊದಲು ಕನ್ನಡವನ್ನು ಕೇಳುವವರೇ ಇರಲಿಲ್ಲ. ಸಂಘ ಸ್ಥಾಪನೆಯಾದ ಬಳಿಕ ಅಲ್ಲಿ ಕನ್ನಡ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಆದರೆ, ಈಗ ದಾಖಲೆಗಳಿಲ್ಲ ಎಂಬ ಕಾರಣ ನೀಡಿ, ಸಂಘದ ಕಚೇರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಇದು ಸ್ಪಷ್ಟವಾಗಿ ಕನ್ನಡ ವಿರೋಧಿ ಧೋರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಮಧ್ಯಪ್ರವೇಶಿಸಿ, ಸಂಘಕ್ಕೆ ಮತ್ತೆ ಆ ಸ್ಥಳವನ್ನು ದೊರಕಿಸಿ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

‘2005ರಲ್ಲಿ ಕೇಂದ್ರೀಯ ಸದನದ ಮುಖ್ಯ ಎಂಜಿನಿಯರ್ ಆಗಿದ್ದ ಕನ್ನಡಿಗ ಎಸ್. ಚಿನ್ನಸ್ವಾಮಿ ಅವರು 8ನೇ ಮಹಡಿಯಲ್ಲಿ ಸಂಘಕ್ಕೆ ಕೊಠಡಿ ನೀಡಿದ್ದರು. ಆಗ ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವರಾಗಿದ್ದ ಎಂ.ವಿ. ರಾಜಶೇಖರನ್ ಅವರು ಉದ್ಘಾಟಿಸಿದ್ದರು. ಈಗಲೂ ಆ ಶಿಲಾಫಲಕ ಅಲ್ಲಿಯೇ ಇದೆ. ಸಂಘಕ್ಕೆ ಸ್ಥಳ ದೊರಕಿದ ಬಳಿಕ ಗ್ರಂಥಾಲಯ ಪ್ರಾರಂಭಿಸಿ, ನಿರಂತರ ಕನ್ನಡ ಚಟುವಟಿಕೆ ನಡೆಸುತ್ತಿದೆ. ಸಂಘಕ್ಕೆ ಸ್ಥಳ ನೀಡಿದಾಗ ಯಾವುದೇ ದಾಖಲೆ ನೀಡಲಿಲ್ಲ. ಈಗ ಅಲ್ಲಿನ ಕನ್ನಡೇತರ ಅಧಿಕಾರಿಗಳು ಪತ್ರ ಬರೆದು, ದಾಖಲೆ ಸಲ್ಲಿಸುವಂತೆ ಪತ್ರ ಬರೆದಿರುವುದು ಕನ್ನಡ ವಿರೋಧಿ ಕೃತ್ಯ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.