ಶನಿವಾರ, ಜೂನ್ 19, 2021
26 °C

₹1.5 ಕೋಟಿ ವಿದ್ಯಾರ್ಥಿವೇತನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಝಾಂ-ಎ-ನಿಸ್ವಾನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮುಸ್ಲಿಂ ಸಮುದಾಯದ 3,800 ಬಡ ವಿದ್ಯಾರ್ಥಿನಿಯರಿಗೆ ₹1.5 ಕೋಟಿ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. 

‘ಶಿಕ್ಷಣ ಮಹಿಳಾ ಸಬಲೀಕರಣದ ಒಂದು ಸಾಧನ. ವಿದ್ಯಾರ್ಥಿಗಳಿಗೆ ಶಿಕ್ಷಣ ಆಯುಧದಂತೆ ಬಲ ತುಂಬುತ್ತದೆ. ನಮಗೆ ಅಗತ್ಯವಾದದ್ದನ್ನು ಪಡೆಯಬೇಕಾದರೆ ಅದಕ್ಕಾಗಿ ಶ್ರಮಪಡಲೇಬೇಕು’ ಎಂದು ಡಿಸಿಪಿ (ದಕ್ಷಿಣ ವಿಭಾಗ) ಇಶಾ ಪಂತ್‌ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

‘ರಸ್ತೆಯಲ್ಲಿ ಹೋಗುವಾಗ ಪೊರ್ಕಿಗಳು ನಿಮ್ಮನ್ನು ಚುಡಾಯಿಸಿದರೆ, ಕಿರುಕುಳ ನೀಡಿದರೆ ಹಾಗೂ ಅಸಭ್ಯವಾಗಿ ವರ್ತಿಸಿದರೆ ಅದಕ್ಕೆ ಹೆದರಬೇಡಿ. ಧೈರ್ಯವಾಗಿ ಅವರನ್ನು ಎದುರಿಸಿ ಪಾಠ ಕಲಿಸಬೇಕು’ ಎಂದರು.

ಟ್ರಸ್ಟ್‌ನ ಅಧ್ಯಕ್ಷೆ ಹುಸ್ನಾ ಜಿಯಾಉಲ್ಲಾ ಷರೀಫ್, ‘ಪದವಿಪೂರ್ವ ವಿದ್ಯಾರ್ಥಿನಿಯರಿಗೆ ₹3 ಸಾವಿರ, ಪದವಿ ಮತ್ತು ಸ್ನಾತಕೋತ್ತರ ಪದವಿ ಓದುವವರಿಗೆ  ₹5 ಸಾವಿರ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ₹‌6 ಸಾವಿರ ಹಾಗೂ ವೈದ್ಯಕೀಯ ‌ವಿದ್ಯಾರ್ಥಿನಿಯರಿಗೆ ₹8 ಸಾವಿರ ವಿದ್ಯಾರ್ಥಿವೇತನ ನೀಡಲಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು