ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಹಗರಣ| ಸಂಸ್ಥೆ ದತ್ತು ತೆಗೆದುಕೊಂಡಿದ್ದ ಶಾಲೆಗೆ 35 ಶಿಕ್ಷಕರ ನಿಯೋಜನೆ

ಎರಡು ದಿನದಲ್ಲಿ ಎಲ್‌ಕೆಜೆ ತರಗತಿಯೂ ಆರಂಭ
Last Updated 20 ಜೂನ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಹೂಡಿಕೆದಾರರಿಗೆ ಹಣ ವಂಚಿಸಿರುವ ಆರೋಪದ ಹೊತ್ತಿರುವ ಚ ತೆಗೆದುಕೊಂಡಿರುವ ಶಿವಾಜಿನಗರದ ‘ವಿಕೆಓ’ಶಾಲೆಗೆ ಸರ್ಕಾರ 35 ಶಿಕ್ಷಕರನ್ನು ನಿಯೋಜಿಸಿದೆ.

ಹಗರಣ ಬೆಳಕಿಗೆ ಬಂದಾಗಿನಿಂದ ಸಂಸ್ಥೆ ನೇಮಕ ಮಾಡಿದ್ದ 70 ಶಿಕ್ಷಕರು ಶಾಲೆಗೆ ಬರುವುದನ್ನು ನಿಲ್ಲಿಸಿದ್ದರು. ಇದರಿಂದ ಪೋಷಕರು ಆತಂಕಗೊಂಡಿದ್ದರು. ಪ್ರತಿಭಟನೆಗಳು ಸಹ ನಡೆದಿದ್ದವು. ಎಲ್‌ಕೆಜಿ, ಯುಕೆಜಿಗೆ ಪ್ರವೇಶಾತಿಯನ್ನೂ ತಡೆಹಿಡಿಯಲಾಗಿತ್ತು. ನಿತ್ಯ ಭದ್ರತೆ ಕಲ್ಪಿಸಿ ಶಾಲೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

‘ಶಾಲೆಗೆ 35 ಶಿಕ್ಷಕರನ್ನು ನಿಯೋಜಿಸಿದ್ದೇವೆ. ಪೂರ್ವ ಪ್ರಾಥಮಿಕ ತರಗತಿಗಳನ್ನು ಮುನ್ನಡೆಸುವ ಸರ್ಕಾರೇತರ ಸಂಸ್ಥೆಗಾಗಿ (ಎನ್‌ಜಿಒ) ಹುಡುಕಾಟ ನಡೆಸುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಂಡು ಆ ವಿಭಾಗವನ್ನು ಸಹ ಪುನರಾಂಭಿಸುತ್ತೇವೆ. ಪೋಷಕರು ಆತಂಕಪಡುವ ಅಗತ್ಯ ಇಲ್ಲ’ ಎಂದು ಬೆಂಗಳೂರು ಉತ್ತರ ಡಿಡಿಪಿಐ ಜಯರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯಿಂದ ಯಾರೂ ವರ್ಗಾವಣೆ ಪತ್ರ ಪಡೆದುಹೋಗಿಲ್ಲ. ಶಾಲೆಯಿಂದ ತೆರಳುವುದಾಗಿ ಯಾರೂ ಹೇಳಿಲ್ಲ. ಶಾಲೆ ಈ ಹಿಂದಿನಂತೆಯೇ ಕಾರ್ಯನಿರ್ವಹಿಸಲಿದೆ’ ಎಂದು ಸ್ಪಷ್ಟಪಡಿಸಿದರು.

ಆಯುಕ್ತ ಭೇಟಿ:ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ.ಜಾಫರ್‌ ಅವರು ಗುರುವಾರ ಶಾಲೆಗೆ ತೆರಳಿ ಪೋಷಕರ ಅಹವಾಲು ಆಲಿಸಿದರು ಹಾಗೂ ಶಾಲೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. ‘ಶಾಲೆ ಈ ಹಿಂದಿನಂತೆಯೇ ನಡೆಯುತ್ತದೆ. ಯಾರೂ ಗಾಬರಿಗೊಳ್ಳಬಾರದು’ ಎಂದು ಅವರು ಅಭಯ ನೀಡಿದರು.

ಸರ್ಕಾರದ ಜಾಗದಲ್ಲಿರುವ ಶಾಲೆ ಇದಾಗಿದ್ದು,ನಿರ್ವಹಣೆ ಜವಾಬ್ದಾರಿಯನ್ನು ಮಾತ್ರ ಐಎಂಎ ಸಂಸ್ಥೆ ವಹಿಸಿಕೊಂಡಿತ್ತು. ಸಂಸ್ಥೆಯಿಂದ ನೇಮಕಗೊಂಡ 70 ಶಿಕ್ಷಕರು ಇಲ್ಲಿದ್ದರು. ಆಗ ಸರ್ಕಾರದಿಂದ ನೇಮಕಗೊಂಡ ಮೂವರು ಶಿಕ್ಷಕರಷ್ಟೇ ಇಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT