ಮಂಗಳವಾರ, ನವೆಂಬರ್ 12, 2019
19 °C

150 ಸರ್ಕಾರಿ ಶಾಲೆಗಳಿಗೆ ಸಿಂಗಾರ ಭಾಗ್ಯ

Published:
Updated:

ಬೆಂಗಳೂರು: ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಪ್ರಯುಕ್ತ ಇದೇ 20ರಿಂದ 22ರ ನಡುವೆ ನಗರದ 150 ಸರ್ಕಾರಿ ಶಾಲೆಗಳು ಸ್ವಚ್ಛಗೊಂಡು ಸಿಂಗಾರಗೊಳ್ಳಲಿವೆ.

‘ಕ್ಯಾಂಪಸ್‌ ಟು ಕಮ್ಯುನಿಟಿ’ ಸ್ವಯಂ ಸೇವಾ ಸಂಘಟನೆಯು ಗಾಂಧಿ ಭವನ, ಎನ್‌ಎಸ್ಎಸ್, ಆರ್ಟ್‌ ಮ್ಯಾಟರ್ಸ್‌ ಹಾಗೂ ಸ್ಟೂಡೆಂಟ್ಸ್‌ ಫಾರ್‌ ಡೆವಲಪ್‌ಮೆಂಟ್‌ ಸಂಘಟನೆಗಳ ಸಹಯೋಗದಲ್ಲಿ ‘ಸ್ಕೂಲ್‌ ಬೆಲ್‌’ ಹೆಸರಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಿದೆ.

ಸುಮಾರು 6 ಸಾವಿರ ಮಂದಿ ಹೀಗೆ ಸಿಂಗಾರಗೊಳಿಸುವ ಕಾಯಕದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ಈ ಸಂಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 18 ಗ್ರಾಮಗಳಲ್ಲಿನ 18ಕ್ಕೂ ಅಧಿಕ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಇದೇ 20ರಿಂದ 22ರವರಗೆ 120 ಶಾಲೆಗಳಲ್ಲಿ ಗೋಡೆಗಳಲ್ಲಿ ಚಿತ್ರ ಬಿಡಿಸುವುದು, ಕ್ರೀಡಾ ಮತ್ತು ವೈದ್ಯಕೀಯ ಸಲಕರಣೆಗಳ ವಿತರಣೆ, ಗಿಡ ಬೆಳೆಯಲು ಮಕ್ಕಳಿಗೆ ಪ್ರೇರಣೆ ನೀಡುವುದು ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಅಲ್ಲದೆ, ಇತರೆ 30 ಶಾಲೆಗಳಲ್ಲಿ ಅಕ್ಟೋಬರ್‌ 2 ಮತ್ತು 3ರಂದು ಕಾರ್ಯಕ್ರಮಗಳು ನಡೆಯಲಿವೆ.

 

ಪ್ರತಿಕ್ರಿಯಿಸಿ (+)