ಭಾನುವಾರ, ಸೆಪ್ಟೆಂಬರ್ 15, 2019
27 °C

ಹವ್ಯಾಸಿ ವಿಜ್ಞಾನಿಗಳನ್ನು ಆಕರ್ಷಿಸಿದ ಮೇಳ

Published:
Updated:
Prajavani

ಬೆಂಗಳೂರು: ಇಲ್ಲಿನ ಪೀಪಲ್ಸ್‌ ಎಜುಕೇಶನ್‌ ಸೊಸೈಟಿ (ಪಿಇಎಸ್‌) ವಿಶ್ವವಿದ್ಯಾಲಯವು ಸಂಶೋಧನೆ, ಸ್ಫೂರ್ತಿ, ಶೋಧನೆ ಉದ್ದೇಶದಿಂದ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳವು ಭಾರಿ ಸಂಖ್ಯೆಯಲ್ಲಿ ಹವ್ಯಾಸಿ ಹಾಗೂ ಯುವ ವಿಜ್ಞಾನಿಗಳನ್ನು ಸೆಳೆಯಿತು.

ವೈಜ್ಞಾನಿಕ ಸಂಶೋಧನೆಗಳನ್ನು ಬಿಂಬಿಸುವ 85ಕ್ಕೂ ಹೆಚ್ಚು ಮಳಿಗೆಗಳಿದ್ದವು. ವಿಜ್ಞಾನ ಮತ್ತು ತಂತ್ರಜ್ಞಾನದ ಹಲವು ವಿಭಾಗಗಳಿಗೆ ಸಂಬಂಧಿಸಿದಂತೆ ಹೊಸ ಆಲೋಚನೆಗಳ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. 

ಪಿಇಎಸ್‌ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರೊ. ಅಜಯ್‌ ಕುಮಾರ್‌ ಉದ್ಘಾಟಿಸಿದರು.  ದೇಶದ 227 ಶಿಕ್ಷಣ ಸಂಸ್ಥೆಗಳ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು. ರಾಜ್ಯದ 30 ಶಾಲೆಗಳ ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ನೀಡಿದರು.

Post Comments (+)