ವ್ಯಕ್ತಿ ಸಮೇತ ಸ್ಕಾರ್ಪಿಯೊ ವಾಹನ ಭಸ್ಮ

7

ವ್ಯಕ್ತಿ ಸಮೇತ ಸ್ಕಾರ್ಪಿಯೊ ವಾಹನ ಭಸ್ಮ

Published:
Updated:

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ರೈಲು ನಿಲ್ದಾಣದ ಸಮೀಪ ವ್ಯಕ್ತಿ ಸಮೇತ ಸ್ಕಾರ್ಪಿಯೊ ವಾಹನವೊಂದು ಭಸ್ಮವಾಗಿದೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ವ್ಯಕ್ತಿಯ ಮೃತದೇಹ ಸುಟ್ಟು ಕರಕಲಾಗಿದ್ದು ಗುರುತು ಪತ್ತೆಯಾಗಿಲ್ಲ.

ವಾಹನವು KA03 MF8906 ಸಂಖ್ಯೆಯ ಬೆಂಗಳೂರು ನೋಂದಣಿ ಹೊಂದಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಧುಸೂಧನ್, ಪಿಎಸ್ ಐ ಮಹೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !